ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

1,292 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರು

Rashmi Kasaragodu
Updated On : 26 Mar 2013, 10:54 am

ಹಾನಗಲ್ಲ: ತಾಲೂಕಿನ ಮೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಒಂದು ರಾಣಿ ಚನ್ನಮ್ಮ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ನಡೆದ ಪರಿಕ್ಷೇಯಲ್ಲಿ ಒಟ್ಟು 200 ಸ್ಥಾನಗಳಿಗೆ 1292 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ತಾಲೂಕಿನ ಐದು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು. ಹಾನಗಲ್ಲ ಪಟ್ಟಣದಲ್ಲಿರುವ ಜೆಇಕೋ ಸಂಸ್ಥೆಯ ಎನ್.ಸಿಜೆಸಿ, ಶ್ರೀ ಕುಮಾರೇಶ್ವರ ಕಲಾ ಮತ್ತು ಮಾಣಿಜ್ಯ ಮಹಾವಿದ್ಯಾಲಯ, ಶಿಕ್ಷಕರ ತರಬೇತಿ ವಿದ್ಯಾಲಯ, ರೋಶನಿ ವಿದ್ಯಾಸಂಸ್ಥೆ, ಮಲ್ಲಿಗಾರ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆದವು. ಗ್ರಾಮೀಣ ಪ್ರದೇಶಗಳಿಂದ ಬಹುಸಂಖ್ಯೆಯಲ್ಲಿ ಅತ್ಯಾಸಕ್ತಿಯಿಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪರೀಕ್ಷೆಯ 5 ಕೇಂದ್ರಗಳ ಮೇಲ್ವಿಚಾರಕರಾಗಿ ಎನ್.ಸಿಜೆಸಿ ಕೇಂದ್ರಕ್ಕೆ ಎಂ.ಎಸ್. ಕೋಟಿ, ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ ಎಂ. ರಂಗಸ್ವಾಮಿ, ಶಿಕ್ಷಕರ ತರಬೇತಿ ವಿದ್ಯಾಲಯಕ್ಕೆ ಎ.ಬಿ. ಹೊಸಮನಿ, ರೋಶನಿ ವಿದ್ಯಾಸಂಸ್ಥೆಯಲ್ಲಿ ಬಾಲರಾಜು. ಎಸ್. ಮಲ್ಲಿಗಾರ ಸರಕಾರಿ ಕಾಲೇಜಿನಲ್ಲಿ ಬಿ.ಎಸ್. ಕರೆಣ್ಣನವರ ಕಾರ್ಯನಿರ್ವಹಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಶಾಂತ ರೀತಿಯಲ್ಲಿ ವ್ಯವಸ್ಥಿತವಾಗಿ ಪರೀಕ್ಷೆ ನಡೆದವು. ಪರೀಕ್ಷೆಗಾಗಿ ಸೂಕ್ತ ಪೊಲೀಸ್ ವ್ಯವಸ್ಥೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement