ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಪಘಾತ: ಓರ್ವ ಸಾವು

Rashmi Kasaragodu
Updated On : 26 Mar 2013, 10:55 am

ಹಾವೇರಿ: ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಹೊರಕ್ಕೆ ಬಿದ್ದ ವ್ಯಕ್ತಿಯೋರ್ವ ಆಸ್ಪತ್ರೆಯಲ್ಲಿ ಮರಣ ಹೊಂದಿದ ಘಟನೆ ಸವಣೂರು ತಾಲೂಕು ಶಿರಬಡಗಿ-ಜಲ್ಲಾಪುರ ರಸ್ತೆ ಮೇಲೆ ಜರುಗಿದೆ. ಮೃತನನ್ನು ಸುರೇಶ ರಾಮಪ್ಪ ಕೆಳಗಡೆ (28) ಎಂದು ಗುರುತಿಸಲಾಗಿದೆ. ಈ ಕುರಿತಂತೆ ವೇಗವಾಗಿ ಆಟೋ ಚಾಲನೆ ಮಾಡಿದ ನಾಗಪ್ಪ ದ್ಯಾಮಣ್ಣ ವೆಂಕಪ್ಪನವರ ವಿರುದ್ಧ ಮೃತನ ಸಹೋದರ ಶಿವರಾಜ ರಾಮಪ್ಪ ಕೆಳಗಡೆ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಮಾತ್ರೆ ಸೇವಿಸಿ ಆತ್ಮಹತ್ಯೆ
ಹಾವೇರಿ:
ಮಕ್ಕಳಾಗದ ಕಾರಣದಿಂದ ಪತಿಯೋರ್ವ ಪತ್ನಿಗೆ ಅವಾಚ್ಯವಾಗಿ ನಿಂದಿಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು, ಇದರಿಂದ ಬೇಸತ್ತ ವಿವಾಹಿತೆ ಅನಾಮಿಕಾ ಮಾತ್ರೆ ಸೇವಿಸಿ ಆಸ್ವಸ್ಥಗೊಂಡು ನಂತರ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ರಾಣಿಬೆನ್ನೂರು ತಾಲೂಕಿನ ಕೊಡಿಯಾಲ ಹೊಸಪೇಟೆಯಲ್ಲಿ ಜರುಗಿದೆ. ಮೃತಳ ಹೆಸರು ತಿಳಿದು ಬಂದಿಲ್ಲ. ಕುಮಾರ ಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಹಾವೇರಿ:
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಹಾನಗಲ್ಲ ತಾಲೂಕಿನ ಆಡೂರು ಗ್ರಾಮದಲ್ಲಿ ಜರುಗಿದೆ. ಮೃತಳನ್ನು ರತ್ನಮ್ಮ ಹನಮಂತಪ್ಪ ಅತ್ತಿಕಟ್ಟಿ(46) ಎಂದು ಗುರುತಿಸಲಾಗಿದೆ. ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಆರೋಗ್ಯ ಕಾಣದೇ ಬೇಸತ್ತು ವಿಷ ಸೇವಿಸಿದ್ದು, ಜಿಲ್ಲಾಸ್ಪತ್ರೆಗೆ ಸೇರಿಸಿದಾಗ್ಯೂ ಚಿಕಿತ್ಸೆ ಫಲಿಸದೇ ಮೃತಪಟ್ಟಳೆಂದು ಆಕೆಯ ಮಗ ಕುಮಾರ ಹನಮಂತಪ್ಪ ಅತ್ತಿಕಟ್ಟಿ ಆಡೂರು ಪೊಲೀಸ್ ಠಾಣೆಯಲ್ಲಿ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.

ಬೆಂಕಿ: ಜಾನುವಾರು ಸಾವು
ಹಾವೇರಿ:
ಆಕಸ್ಮಿಕ ಬೆಂಕಿಯಿಂದ ಜಾನುವಾರುಗಳನ್ನು ಕಟ್ಟಿದ್ದ ಕೊಟ್ಟಿಗೆಗೆ ಬೆಂಕಿ ತಗುಲಿ, ಅಲ್ಲಿದ್ದ ರು. 35 ಸಾವಿರ ಬೆಲೆಯ ಎತ್ತು ಸಜೀವ ದಹನವಾದ ಘಟನೆ ಸವಣೂರು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಜರುಗಿದೆ. ಮೃತ ಎತ್ತು ಹಾಗೂ ಸುಟ್ಟುಹೋದ ಕೊಟ್ಟಿಗೆ ಮರಿಯಪ್ಪ ನಿಂಗಪ್ಪ ಹರಿಜನ ಎಂಬುವರಿಗೆ ಸೇರಿತ್ತೆನ್ನಲಾಗಿದೆ. ಈ ಕುರಿತಂತೆ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಯಂತ್ರಕ್ಕೆ ಸಿಲುಕಿ ಯುವಕ ಸಾವು
ಹಾವೇರಿ:
ತಾನೇ ನಡೆಸುತ್ತಿದ್ದ ಗೋವಿನಜೋಳದ ಯಂತ್ರಕ್ಕೆ ಯುವಕನೋರ್ವ ಸಿಲುಕಿ ಸಾವನ್ನಪ್ಪಿದ ಘಟನೆ ತಾಲೂಕಿನ ಹಿರೇಲಿಂಗದಹಳ್ಳಿ ಗ್ರಾಮದಲ್ಲಿ ಜರುಗಿದೆ. ಮೃತ ಯುವಕನನ್ನು ಶಂಕ್ರಪ್ಪ ಬಡಣ್ಣನವರ (20) ಎಂದು ಗುರುತಿಸಲಾಗಿದೆ. ಗೋವಿನಜೋಳ ಸುಲಿಯುವ ಯಂತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಯಂತ್ರದೊಳಕ್ಕೆ ಬಿದ್ದು ಯುವಕ ಸಾವನ್ನಪ್ಪಿದ್ದು, ಈ ಕುರಿತಂತೆ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement