ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಉಡಿ ತುಂಬಿಮಹಿಳಾ ದಿನ ಆಚರಣೆ

Rashmi Kasaragodu
Updated On : 26 Mar 2013, 10:50 am

ಹಿರೇಕೆರೂರು: ಪಟ್ಟಣದ ವಿದ್ಯಾನಗರದಲ್ಲಿ ದುರ್ಗಾಂಬಿಕಾ ಮಹಿಳಾ ಮಂಡಳದ ಮಹಿಳೆಯರು ಮುತೈದೆಯರಿಗೆ ಉಡಿ ತುಂಬುವ ಮೂಲಕ ವಿಶ್ವ ಮಹಿಳಾ ದಿನಾಚರಣೆ ಆಚರಿಸಿದರು. ಈ ಸಂದರ್ಭ ಶಿಕ್ಷಕಿ ಶಿವಲೀಲಾ ಬಡಳ್ಳಿ ಮಾತನಾಡಿ, ಹೆಣ್ಣು ಮಗು ಎಂದು ಮಹಿಳೆಯರಾದ ನಾವೇ ದೂರದೇ ಶಿಕ್ಷಣ ನೀಡುವ ಮೂಲಕ ಅವಳನ್ನು ಸಮಾಜದಲ್ಲಿ ಶಕ್ತಿಯುತ ಮಹಿಳೆಯಾಗಿ ಬೆಳೆಸಬೇಕೆಂದು ಕರೆ ನೀಡಿದರು. ಪ್ರಾಮಾಣಿಕ ಕೆಲಸ ಮಾಡಿದಾಗ ಮಹಿಳೆಯರಾದ ನಾವು ಯಾರಿಗೂ ಭಯ ಪಡಬೇಕಾಗಿಲ್ಲ, ಮಹಿಳೆಯರು ಸಹನೆ, ಕರುಣೆ, ಪ್ರೀತಿ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು. ಗೀತಾ ಪಾಟೀಲ ಮಾತನಾಡಿ, ತೊಟ್ಟಿಲನ್ನು ತೂಗುವ ಕೈಗಳು ಈ ದೇಶವನ್ನೇ ತೂಗಬಲ್ಲವು. ಇದಕ್ಕೆ ಶಿಕ್ಷಣದ ಅಹತ್ಯವಿದೆ ಎಂಬುವುದನ್ನು ಮಹಿಳೆಯರಾದ ನಾವು ಅರ್ಥೈಸಿಕೊಳ್ಳಬೇಕು. ಗಂಡು, ಹೆಣ್ಣು ಮಕ್ಕಳೆರಡೆ ಇರಲಿ. ಸಮಾನ ಶಿಕ್ಷಣ ಕೊಡಿಸುವ ಮೂಲಕ ಅವರನ್ನೇ ಸಮಾಜದ ಆಸ್ತಿಯನ್ನಾಗಿ ಮಾಡುವಂತೆ ಹೇಳಿದರು. ಉಮಾ ಶಂಕರ ಅಧ್ಯಕ್ಷತೆ ವಹಿಸಿದ್ದರು. ಕುಸುಮಾ, ರತ್ನಮ್ಮ, ಉಮಾ ಚನ್ನಗೌಡ್ರ, ಚಂದ್ರಕಲಾ ನೀಲನಗೌಡ್ರ, ನಾಗರತ್ನಾ ಚಿಂದಿ, ನಾಗಮ್ಮ ಅಂಗಡಿ, ಸರೋಜಮ್ಮ ತಿಪ್ಪಕ್ಕಳವರ ಮೊದಲಾದವರು ಉಪಸ್ಥಿತರಿದ್ದರು. ನೂತನ ಪಪಂ ಸದಸ್ಯೆ ಗೀತಾ ದಂಡಗಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಈರಮ್ಮ ಪೂಜಾರ ವಂದಿಸಿದರು.

ಇಂದು ಜಿಲ್ಲಾ ಮಟ್ಟದ ಮೀನಾ ಮೇಳ
ಹಾವೇರಿ:
ಮಕ್ಕಳಲ್ಲಿನ ಕ್ರಿಯಾಶೀಲ ವ್ಯಕ್ತಿತ್ವ ಗುರುತಿಸಿ, ಅವರ ಯಶೋಗಾಥೆಗಳನ್ನು ಪರಸ್ಪರ ಸಂಹವನದ ಮೂಲಕ  ಚರ್ಚಿಸುವುದಕ್ಕೆ ವೇದಿಕೆ ಕಲ್ಪಿಸುವ 2012-13ನೇ ಸಾಲಿನ ಹಾವೇರಿ ಜಿಲ್ಲಾಮಟ್ಟದ ಮೀನಾ ಮೇಳ ಮಾ. 26ರಂದು ಬೆಳಗ್ಗೆ 10ಕ್ಕೆ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಡಿಡಿಪಿಐ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ. ಜಿಪಂ ಸಿಇಓ ಉಮೇಶ ಕುಸುಗಲ್ಲ ಉದ್ಘಾಟಿಸುವರು. ಜಿಲ್ಲೆಯ ವಿವಿಧ ಶಾಲೆಗಳ 2 ಸಾವಿರ ಮಕ್ಕಳು, 500 ಶಿಕ್ಷಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.

ಪಕ್ಷೇತರನಾಗಿ ಸ್ಪರ್ಧೆ: ಎನ್.ಡಿ. ಮರಿಗೌಡ್ರ
ಶಿಗ್ಗಾಂವಿ:
ಶಿಗ್ಗಾಂವಿ ವಿಧಾನಸಭೆ ಮತಕ್ಷೇತ್ರದಿಂದ ಭಾರತೀಯ ಕೃಷಿಕ ಸಮಾಜದ ರಾಜ್ಯ ಉಪಾಧ್ಯಕ್ಷ ಎನ್.ಡಿ. ಮರಿಗೌಡ್ರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುದುರೆ ಮೇಲೆ ಸಂಚರಿಸುತ್ತ ಪ್ರಚಾರ ಗಿಟ್ಟಿಸಿ ವನ್ಯಜೀವಿಗಳ ಆಸಕ್ತರ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು. ಚುನಾವಣಾ ಪ್ರಚಾರಕ್ಕೆ ಬಳಸಿದರೂ ಕುದುರೆಗೆ ಯಾವುದೇ ಹಿಂಸೆ ನೀಡಿಲ್ಲ ಎಂದು ಅರಣ್ಯಾಧಿಕಾರಿಗಳ ಅನುಮತಿಗೂ ಯತ್ನಿಸಿದ್ದರು. ತಾಲೂಕಿನ ಕೃಷಿಕ ಸಮಾಜ ಹಾಗೂ ರೈತಪರ ಸಂಘಟನೆಗಳ ಸಹಕಾರದಿಂದ ರೈತಪರವಾಗಿ ಕಾರ್ಯ ನಿರ್ವಹಿಸುವುದಾಗಿ ಅವರು ಆಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement