ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೆಜೆಪಿ ಸದಸ್ಯರ ಮನವಿ ಪ್ರಚಾರ ತಂತ್ರ: ಬಳ್ಳಾರಿ

Rashmi Kasaragodu
Updated On : 26 Mar 2013, 10:53 am

ಬ್ಯಾಡಗಿ: ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸದ ಪುರಸಭೆ ಕೆಜೆಪಿ ಸದಸ್ಯರು, ಡೋಂಗಿ ಪ್ರಚಾರಕ್ಕಾಗಿ ಪುರಸಭೆಗೆ ಮನವಿ ಸಲ್ಲಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಬಳ್ಳಾರಿ ಪ್ರಶ್ನಿಸಿದರು.
ನಾಗರಿಕ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಮುಖ್ಯಾಧಿಕಾರಿಗೆ ಮೂಲಭೂತ ಸೌಲಭ್ಯಕ್ಕಾಗಿ ಮನವಿ ಸಲ್ಲಿಸುವುದು ಖಂಡನೀಯ. ಪ್ರಚಾರಕ್ಕಾಗಿ ಮನವಿ ಸಲ್ಲಿಸುವುದನ್ನು ಕೈಬಿಡುವಂತೆ ಸಲಹೆ ನೀಡಿದ ಅವರು ಪತ್ರಿಕಾ ವರದಿಗಳನ್ನು ಪ್ರದರ್ಶಿಸಿದರು.
ಒಬ್ಬ ಸದಸ್ಯನಾಗಿ ತಮ್ಮ ಜವಾಬ್ದಾರಿಗಳ ಕುರಿತು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಕೆಲ ವಾರ್ಡ್.ಗಳಲ್ಲಿ ಇಂದಿಗೂ ಚರಂಡಿಗಳು ಸ್ವಚ್ಛವಾಗಿಲ್ಲ, ಸಮರ್ಪಕವಾಗಿ ನೀರು ವಿತರಣೆಯಾಗುತ್ತಿಲ್ಲ. ನಗರದ ವ್ಯಾಪ್ತಿಯಲ್ಲಿ ವಿಪರೀತ ಸೊಳ್ಳೆಗಳು ಉತ್ಪಾದನೆಯಾಗುತ್ತಿದ್ದು, ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಬಸವೇಶ್ವರ ನಗರ ಮುಂತಾದೆಡೆ ಇಂತಹ ಸಮಸ್ಯೆಗಳಿಲ್ಲ. ಅಧಿಕಾರಿಗಳ ತಾರತಮ್ಯ ನೀತಿ ವಿರುದ್ಧ ನೂತನ ಸದಸ್ಯರು ಚಕಾರವೆತ್ತುತ್ತಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement