ತುರುಸಿನ ಟಗರು ಕಾಳಗ
ಹಾನಗಲ್ಲ: ಗ್ರಾಮದೇವಿ (ದ್ಯಾಮವ್ವ) ಜಾತ್ರೋತ್ಸವದ ನಿಮಿತ್ತ ಹಾನಗಲ್ಲಿನ ಕ್ರೀಡಾಂಗಣದಲ್ಲಿ ಟಗರಿನ ಕಾಳಗ ಜರುಗಿ ಜನರನ್ನು ರೋಮಾಂಚನಗೊಳಿಸಿತು.
ಜಾತ್ರಾ ಸಮಿತಿ ಮುಖಂಡರಾದ ಹನುಮಂತಪ್ಪ ನಾಗಜ್ಜನವರ, ಹನುಮಂತಪ್ಪ ಬೊಮ್ಮನಹಳ್ಳಿ ಚಾಲನೆ ನೀಡಿದರು. ಟಗರಿನ ಕಾಳಗದಲ್ಲಿ ಹಾಲು ಹಲ್ಲಿನಿಂದ ಹಿಡಿದು 6 ಹಲ್ಲಿನ ಟಗರುಗಳು ಭಾಗವಹಿಸಿದ್ದವು. ಈ ಕಾಳಗದಲ್ಲಿ ಹಾನಗಲ್ಲ ಗ್ರಾಮದ 6 ಹಲ್ಲಿನ ಟಗರು ಗುರುರಾಜ ಕಲಾಲ ಅವರ ಟಗರು ಪ್ರಥಮ, ದೀಪಕ ಕಿತ್ತೂರು ಅವರ ಟಗರು ದ್ವಿತೀಯ, 4 ಹಲ್ಲಿನ ಟಗರಿನ ಕಾಳಗದಲ್ಲಿ ಮಹೇಶ ಪವಾಡಿ ಅವರ ಟಗರು ಪ್ರಥಮ, ಸುರೇಶ ತಿಳವಳ್ಳಿ ಅವರ ಟಗರು ದ್ವಿತೀಯ, 2 ಹಲ್ಲಿನ ಟಗರಿನ ಕಾಳಗದಲ್ಲಿ ಸಂಜೀವ ಏಸಕ್ಕನವರ ಪ್ರಥಮ, ಮಂಜು ತಿಳವಳ್ಳಿ ದ್ವಿತೀಯ ಹಾಗೂ ಹಾಲು ಹಲ್ಲಿನ ವಿಭಾಗದಲ್ಲಿ ಸುರೇಶ ಕೊಲ್ಲಾಪುರ ಪ್ರಥಮ ಹಾಗೂ ಕೃಷ್ಣಾ ಬಂಕಾಪುರ ದ್ವಿತೀಯ ಸ್ಥಾನಗಳನ್ನು ಪಡೆದು ಜಯಶಾಲಿಯಾದವು. ಟಗರಿನ ಕಾಳಗದ ನಿರ್ಣಾಯಕರಾಗಿ ಮಾರುತಿ ಹರಿಹರ, ದೀಪಕ ಕಿತ್ತೂರು, ಶಿವು ಹಳೆಕೋಟಿ, ಮಹೇಶ ಪವಾಡಿ ಕಾರ್ಯನಿರ್ವಹಿಸಿದರು. ಶಿವಾಜಿ ಹರಿಜನ, ತಮ್ಮಣ್ಣ ಬಂಕಾಪುರ, ಪರಶುರಾಮ ನಿಂಗೋಜಿ, ರವಿರಾಜ ಕಲಾಲ, ನಾಗೇಂದ್ರ ಬೊಮ್ಮನಹಳ್ಳಿ, ರಾಜು ತಳಗೇರಿ, ಯಲ್ಲಪ್ಪ ಬಂಕಾಪುರ, ಮಹೇಶ ಕೋಟಿ, ಪ್ರಕಾಶ ಹಂಗರಗಿ ಇದ್ದರು.