ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರೈತರಿಂದ ದಿಢೀರ್ ಪ್ರತಿಭಟನೆ

Rashmi Kasaragodu
Updated On : 26 Mar 2013, 10:50 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮಾ.25
ರೈತರಿಗೆ ಅಗತ್ಯವಾದ ಪಹಣಿ ಪತ್ರಿಕೆಗಳನ್ನು ಪಡೆಯಲು ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿರುವ ಭೂಮಿ ಕೇಂದ್ರದ ಎದುರು ನೂರಾರು ರೈತರು ದಿನವಿಡಿ ಸರದಿಯಲ್ಲಿ ನಿಂತು ಸುಸ್ತಾಗಿ ಸಂಜೆ ವೇಳೆಗೆ ದಿಡೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಸಂತೆ ದಿನವಾಗಿದ್ದರಿಂದ ರೈತರ ದಟ್ಟಣೆ ಅಧಿಕವಾಗಿತ್ತು. ರೈತರ ಗದ್ದಲ, ತಳ್ಳಾಟ ಮತ್ತು ನೂಕಾಟಗಳು ಸಾಮಾನ್ಯವಾಗಿದ್ದವು. ಮನೆ ಹಾಗೂ ಹೊಲದಲ್ಲಿರುವ ಕೆಲಸಗಳನ್ನು ಬದಿಗೊತ್ತಿ ಪಹಣಿ ಪತ್ರಿಕೆ ಪಡೆಯಲು ಬೆಳಗ್ಗೆಯಿಂದ ಸರದಿಯಲ್ಲಿ ಕಾಯ್ದರೂ ಪಹಣಿ ಪತ್ರಿಕೆ ಪಡೆಯಲು ಸಾಧ್ಯವಾಗಿಲ್ಲ ಎಂದು ಎಸ್.ಎಂ. ಹಲಗೇರಿ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಆಗುವ ಅನಾನುಕೂಲ ತಪ್ಪಿಸಲು ಹಾಗೂ ಅವರ ಸಮಯ ಉಳಿಸಲು ಪಹಣಿ ಪತ್ರಿಕೆಯನ್ನು ಹೋಬಳಿ ಮಟ್ಟದಲ್ಲಿಯೇ ವಿತರಿಸುವ ವ್ಯವಸ್ಥೆ ಆಗಬೇಕು ಎಂದು ಬಿ.ಎಸ್. ಆರಾಧ್ಯಮಠ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರೈತರಾದ ಆರ್.ಸಿ. ಹಿರಿಯಕ್ಕನವರ, ಎಂ.ಬಿ. ತಿಪ್ಪಾಯಿಕೊಪ್ಪ, ಶಂಭು ಸಾವುಕಾರ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement