ಕವಿಗಳು ಕಂಡ ನಿಸರ್ಗ ತತ್ವದರ್ಶನ - ನಾಳೆ ವಿಚಾರ ಸಂಕಿರಣ
ಹಾವೇರಿ: ಕವಿಗಳು ಕಂಡ ನಿಸರ್ಗ ತತ್ವದರ್ಶನ ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಮಾ. 28ರಂದು ಬೆಳಗ್ಗೆ 11 ಗಂಟೆಗೆ ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಜರುಗಲಿದೆ.
ಧಾರವಾಡದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್.ಎಂ. ವೃಷಭೇಂದ್ರಸ್ವಾಮಿ ಉದ್ಘಾಟಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಬಿ. ಮಾಸಣಗಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಕವಿವಿ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ. ಭಾಸ್ಕರ್ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭದಲ್ಲಿ 2 ಗೋಷ್ಠಿಗಳು ನಡೆಯಲಿದ್ದು, ಪ್ರೊ. ಕೆಂಚವೀರಪ್ಪ ಹಾವೇರಿ, ಡಾ. ಎಚ್.ಡಿ.ಹೆಗ್ಗಡೆ, ಸುಜಾತಾ ದೇವರಮನಿ, ಡಾ. ಸದಾಶಿವ ದೊಡ್ಡಮನಿ, ಡಾ. ಲಿಂಗರಾಜ ಪಾಟೀಲ ಹಾಗೂ ಡಾ. ನಿಶಾ ಹುಲ್ಲೂರ, ಸತೀಶ ಕುಲಕರ್ಣಿ, ಪುಷ್ಪಾ ಶಲವಡಿಮಠ, ಡಾ. ಪ್ರೇಮಾನಂದ ಲಕ್ಕಣ್ಣನವರ, ಪ್ರೊ. ಅನಿತಾ ಹಾಲಮತ, ಪ್ರೊ. ವಿ.ಎಸ್.ಕೆಲೂರ ಹಾಗೂ ಪ್ರೊ. ವೀರೇಶ ಹಿರೇಮಠ ಭಾಗವಹಿಸುವರು. ಸಂಜೆ ಜರುಗುವ ಸಮಾರೋಪ ಸಮಾರಂಭದಲ್ಲಿ ಪ್ರೊ. ಎಸ್.ಎಫ್. ಪೂಜಾರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರೊ. ಎಸ್.ವಿ. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸುವರು ಎಂದು ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ.ಭಾಸ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.