ನಾಳೆಯಿಂದ ಜಾತ್ರೆ
ಹಾವೇರಿ: ಹಾನಗಲ್ಲ ತಾಲೂಕಿನ ಕಲಕೇರಿಯಲ್ಲಿ ಬಸವಣ್ಣ ದೇವರ ರಥೋತ್ಸವ ಹಾಗೂ ವೀರಭದ್ರೇಶ್ವರ ಗುಗ್ಗಳ ಮಾ. 28ರಿಂದ ಏ. 8ರ ವರೆಗೆ ಜರುಗಲಿದೆ.
ಮಾ. 28ರಂದು ಗ್ರಾಮದ ಎಲ್ಲ ದೇವರುಗಳಿಗೆ ಕಂಕಣಧಾರಣೆ, ಮಾ. 31ರಂದು ರಾತ್ರಿ 12ಕ್ಕೆ ಬಸವಣ್ಣ ದೇವರಿಗೆ ಹಾಗೂ ಜಯಸಿಂಗೇಶ್ವರ ಶಿವಲಿಂಗಕ್ಕೆ ಮಹಾರುದ್ರಾಭಿಷೇಕ. ಏ. 1ರಂದು ಸಾಮೂಹಿಕ ವಿವಾಹಗಳು ಜರುಗಲಿವೆ. ಏ. 2ರಂದು ಬೆಳಗ್ಗೆ 8ಕ್ಕೆ ಪುಷ್ಪ ರಥೋತ್ಸವ, ಏ. 3ರಂದು ಬೆಳಗ್ಗೆ 4 ಗಂಟೆಗೆ ವೀರಭದ್ರ ದೇವರಿಗೆ ಮಹಾರುದ್ರಾಭಿಷೇಕ ನಂತರ 8 ಗಂಟೆಗೆ ವೀರಭದ್ರೇಶ್ವರ ಗುಗ್ಗಳ ಹಾಗೂ ಮಹಾರಥೋತ್ಸವ, ಅಗ್ನಿಕುಂಡ ಹಾಯುವುದು ನಂತರ ಅನ್ನಸಂತರ್ಪಣೆ ಜರುಗಲಿದೆ. ಏ. 4ರಂದು ಮಧ್ಯಾಹ್ನ 3ಕ್ಕೆ ಹೇರೂರ ಗುಬ್ಬಿ ಅಜ್ಜನಮಠದ ನಂಜುಂಡೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಓಕಳಿ ಬಂಡಿ ಮೆರವಣಿಗೆ ಜರುಗುವುದು. ಏ. 3ರಿಂದ ಸಂಜೆ 6ರಿಂದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.