ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅನಕ್ಷರತೆ ತೊಲಗಿಸಿ: ಎಸ್.ಟಿ. ಮೆಳ್ಳಳ್ಳಿ

Rashmi Kasaragodu
Updated On : 28 Mar 2013, 11:09 am

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 27
ಅನಕ್ಷರತೆ ರಾಜ್ಯ ಹಾಗೂ ದೇಶದಲ್ಲಿ ದೊಡ್ಡ ಪೆಡಂಭೂತವಾಗಿ ಕಾಡುತ್ತಿದೆ. ಆದ್ದರಿಂದ ಸಾಕ್ಷರ ಭಾರತ ಕಾರ್ಯಕ್ರಮದ ಮೂಲಕ ಅನಕ್ಷರತೆ ಹೋಗಲಾಡಿಸಲು ಸತತ ಪ್ರಯತ್ನ ಮುಂದುವರಿಸಲಾಗುತ್ತಿದೆ. ಪ್ರೇರಕರು ಸ್ವಯಂಸ್ಫೂರ್ತಿಯಿಂದ ಅನಕ್ಷರತೆ ಹೋಗಲಾಡಿಸಬೇಕು. ನವ ಸಾಕ್ಷರರನ್ನು ಪರೀಕ್ಷೆಗೆ ನೋಂದಣಿ ಮಾಡಿಸಬೇಕು ಎಂದು ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ಟಿ. ಮೆಳ್ಳಳ್ಳಿ ಹೇಳಿದರು.
ಪಟ್ಟಣದ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಸಭಾಭವನದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ ಹಾಗೂ ರಾಜ್ಯ ಸಾಕ್ಷರತಾ ಮಿಷನ್‌ನಿಂದ ತಾಲೂಕು ಮಟ್ಟದ ಮೂಲ ಸಾಕ್ಷರತೆಯ ಮೌಲ್ಯಮಾಪನ ಹಾಗೂ ಪರೀಕ್ಷೆ ಪೂರ್ವಭಾವಿ ಕಾರ್ಯಾಗಾರ ಜರುಗಿತು.
ತಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಕ್ಷರತೆ ಪ್ರೇರಕರಿಗೆ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿ ಎನ್.ಬಿ. ಶ್ರೀನಿವಾಸ, ಮಾ. 17ರಂದು ನಡೆಯುವ ಮೂಲ ಸಾಕ್ಷರತೆ ಮೌಲ್ಯಮಾಪನ ಹಾಗೂ ಪರೀಕ್ಷೆಗಾಗಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಾಲೂಕು ಮಟ್ಟದಲ್ಲಿ ಮೌಲ್ಯಮಾಪನ ಮಾಡಬೇಕು. ಪ್ರೇರಕರು, ಲೋಕ ಶಿಕ್ಷಣ ಕೇಂದ್ರಗಳಲ್ಲಿ ಸ್ವಯಂಸೇವಕ ಬೋಧಕರ ನೆರವಿನೊಂದಿಗೆ ನವ ಸಾಕ್ಷರರು ಹಾಗೂ ಸಾಕ್ಷರ ಭಾರತ ಕಾರ್ಯಕ್ರಮದಲ್ಲಿ ಕಲಿತ ನವ ಸಾಕ್ಷರರನ್ನು ಪರೀಕ್ಷೆಗೆ ನೋಂದಣಿ ಮಾಡಿಸಬೇಕೆಂದರು.
ತೊಂಡುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ವೈ.ಡಿ. ಕುರಿ, ಎಪಿಎಂಸಿ ಸದಸ್ಯ ವೈ.ಡಿ. ಗದಿಗೆಣ್ಣವರ, ಸಾಕ್ಷರ ಭಾರತ ಕಾರ್ಯಕ್ರಮದ ತಾಲೂಕು ಸಂಯೋಜಕ ಎಚ್.ಎಫ್. ದ್ಯಾವನಗೌಡ್ರ, ಟಿ.ವಿ.ಪಾಟೀಲ್, ಎನ್.ಆರ್. ಈಳಿಗೇರ, ಸಿ.ಜಿ. ಹಿರೇಮಠ ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಗ್ರಾಮಗಳ 40 ಪ್ರೇರಕರು, 20 ಮುಖ್ಯಾಧ್ಯಾಪಕರು ಉಪಸ್ಥಿತರಿದ್ದರು. ಪ್ರೇರಕರಾದ ವಿಜಯಾ ಪಲ್ಲೇದ, ನಿಂಗಪ್ಪ ಮುದ್ದಣ್ಣವರ ನಿರ್ವಹಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement