ಏ. 2ರಂದು ಗಾಡಾ ಓಡಿಸುವ ಸ್ಪರ್ಧೆ
ಶಿಗ್ಗಾಂವಿ: ತಾಲೂಕಿನ ಮುಗಳಿ ಗ್ರಾಮದಲ್ಲಿ ಗ್ರಾಮದೇವಿ ಸಮಿತಿ ಆಶ್ರಯದಲ್ಲಿ ರಾಜ್ಯ ಮಟ್ಟದ ಗಾಡಾ ಓಡಿಸುವ ಸ್ಪರ್ಧೆಯನ್ನು ಏ. 2ರಂದು ಏರ್ಪಡಿಸಲಾಗಿದೆ.
ವಿಜೇತರಿಗೆ ಆಕರ್ಷಕ 26 ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅರುಣ ರಾಮಗೇರಿ, ಮೊ. 9538039972, ಗುರುನಾಥ ಬಿಸೆಟ್ಟಿ ಮೊ. 9538386848 ಸಂಪರ್ಕಿಸಲು ಕೋರಲಾಗಿದೆ. ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಅತಿಥಿಗಳಾಗಿ ಜಿಪಂ ಸದಸ್ಯ ಬಿ.ಟಿ. ಇನಾಮತಿ, ಮಾಜಿ ಶಾಸಕ ಎಸ್.ಎ. ಖಾದ್ರಿ, ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಶ್ರೀಕಾಂತ ದುಂಡಿಗೌಡ್ರ ಆಗಮಿಸುವರು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.