ದುಶ್ಚಟ ಮುಕ್ತರಾಗಿ ಬದುಕಿ
ಶಿಗ್ಗಾಂವಿ: ಮನುಷ್ಯ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದಾನೆ. ತಾಯಿ-ತಂದೆ ಸೇವೆ, ಗುರುವಿನ ಜ್ಞಾನೋಪದೇಶವನ್ನು ಮರೆಯುತ್ತಿದ್ದಾನೆ. ಸಮಾಜಕ್ಕೆ ಜ್ಞಾನಮಾರ್ಗದ ಅಗತ್ಯವಿದೆ. ದುಶ್ಚಟಗಳಿಂದ ದೂರವಾಗಿ ಎಲ್ಲರೂ ಬದುಕಬೇಕಿದೆ ಎಂದು ಶಿರಹಟ್ಟಿ ಸಂಸ್ಥಾನ ಮಠದ ಪಟ್ಟಾಧ್ಯಕ್ಷ ಫಕೀರಸಿದ್ದರಾಮ ಶ್ರೀಗಳು ಹೇಳಿದರು.
ತಾಲೂಕಿನ ಕುನ್ನೂರ ಗ್ರಾಮದಲ್ಲಿ ಜರುಗಿದ 656ನೇ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಮಾನವರು ದಾನವರಾಗುತ್ತಿದ್ದು, ಮೌಲ್ಯಾಧಾರಿತ ಬದುಕು ನಡೆಸಬೇಕಿದೆ ಎಂದರು.
ಎಲ್.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಶಿರಹಟ್ಟಿ ಸಂಸ್ಥಾನಮಠ ಶಿಥಿಲಾವಸ್ಥೆಯಲ್ಲಿತ್ತು. ಅಂಥ ಸಂದರ್ಭದಲ್ಲಿ ಜೋಳಿಗೆ ಹಿಡಿದು ಭಕ್ತರಿಂದಲೇ ಹಣ ಸಂಗ್ರಹಿಸಿ, ಪುನರುತ್ಥಾನ ಮಾಡಿಸಿದ ಶ್ರೇಯ ಶ್ರೀಗಳಿಗೆ ಸಲ್ಲುತ್ತದೆ. ಇದರ ಲಾಭ ಭಕ್ತರಿಗಾಗಿ ದಾಸೋಹ, ಭಕ್ತಿ ಸಿಂಚನದ ಮೂಲಕ ಮತ್ತೆ ಸಿಗುತ್ತಿದೆ ಎಂದರು.
ಸಿ.ವಿ. ಮತ್ತಿಗಟ್ಟಿ ಸ್ವಾಗತಿಸಿದರು. ಎನ್.ಸಿ. ಪಾಟೀಲ, ಶಿವಯ್ಯ ಹಿರೇಮಠ, ಕುಬೇರಪ್ಪ ಮೋರಬದ, ಉದ್ಯಮಿ ಜಯದೇವ ಅಗಡಿ, ಸೋಮಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷ ಗೋವಿಂದ ದುಂಡಪ್ಪನವರ, ಭರಮಗೌಡ್ರ ಪಾಟೀಲ, ಜಿಪಂ ಸದಸ್ಯ ಸಿ.ಎಸ್. ಪಾಟೀಲ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ನಿಲಕಂಠಗೌಡ ಬ್ಯಾಹಟ್ಟಿ, ರಹಿಮಾನಸಾಬ ಮುಲ್ಲಾ, ಹುಸೇನಸಾಬ ಬಂಕಾಪುರ, ಯಲ್ಲಪ್ಪ ನವಲೂರ, ಕಲ್ಲಪ್ಪ ಬೀರವಳ್ಳಿ, ನಿಂಗಪ್ಪ ಮಾದರ, ತಮ್ಮಣ್ಣಾ ನವಲೂರ, ಯಲ್ಲಪ್ಪ ಅಕ್ಕಿ, ಪೀರಸಾಬ ಮತ್ತೇಖಾನ, ರಾಮಣ್ಣಾ ಇಂದೂರ, ಪರಶುರಾಮ ಕಾಳಿ, ಬಸಪ್ಪ ಪತ್ತಾರ, ಪರಶುರಾಮ ಕಾಳಿ ಅವರನ್ನು ಸನ್ಮಾನಿಸಲಾಯಿತು.
ಮಹದೇವಪ್ಪ ಬಿರವಳ್ಳಿ, ವರ್ಧಮಾನ ಶೆಟ್ಟೆಪ್ಪನವರ, ಯಮನಪ್ಪ ನವಲೂರ, ಎಂ.ಎಂ. ತಡಸ, ರಾಮಪ್ಪ ಕರಡಿ, ಬಸವರಾಜ ಬೂದ್ಯಾಳ, ಸುರೇಶ ಬೇಂಡಿಗೇರಿ, ರುದ್ರಪ್ಪ ಕರಡಿ ಉಪಸ್ಥಿತರಿದ್ದರು. ಬಿ.ಎಸ್. ಹಿರೇಮಠ ನಿರ್ವಹಿಸಿ, ವಂದಿಸಿದರು.