ಬಣಕಾರ ನೇತೃತ್ವದಲ್ಲಿ ಕೆಜೆಪಿ ಪ್ರಚಾರ
ಹಿರೇಕೆರೂರು: ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳನ್ನು ಪರಿಗಣಿಸಿ ಬೆಂಬಲ ನೀಡುವಂತೆ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಾಜಿ ಶಾಸಕ ಯು.ಬಿ. ಬಣಕಾರ ನಾಮಪತ್ರ ಸಲ್ಲಿಕೆಗೂ ಮುನ್ನವೇ ಮತದಾರರ ಮನೆಗೆ ತೆರಳಿ ಮನವೊಲಿಸುವ ಪ್ರಯತ್ನ ಆರಂಭಿಸಿದ್ದಾರೆ.
ಮಂಗಳವಾರ ಕ್ಷೇತ್ರದ ನಾಗವಂದ, ಅಣಜಿ, ಆರಿಕಟ್ಟಿ ತಾಂಡ ಹಾಗೂ ಗುಡ್ಡದಮಾದಾಪುರ ಗ್ರಾಮಗಳಲ್ಲಿ ಪಾದಯತ್ರೆ ನಡೆಸಿ ಮತ ಯಾಚಿಸಿದರು. ಈ ವೇಳೆ ಮಾತನಾಡಿದ ಬಣಕಾರ, ಐದು ವರ್ಷಗಳಲ್ಲಿ ಎದುರಿಸಿದ ಎಲ್ಲ ಚುನಾವಣೆಗಳಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಕೆಜೆಪಿ ತಾಲೂಕಿನಲ್ಲಿ ಬಲಿಷ್ಠವಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಕಾರ್ಯಕರ್ತರು ಸನ್ನದ್ಧರಾಗಬೇಕು. ನಾನು ಜನಸೇವೆಗೆ ಸದಾ ಬದ್ಧನಾಗಿದ್ದೇನೆ. ತಮ್ಮನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿಯ ಹರಿಕಾರ ಬಿಎಸ್‌ವೈ ಕೈ ಬಲಪಡಿಸುವಂತೆ ಮನವಿ ಮಾಡಿಕೊಂಡರು.
ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹೇಶ ಗುಬ್ಬಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ರಾಯ್ಕರ, ಜಿಪಂ ಸದಸ್ಯೆ ಸುಜಾತಾ ಕೊಟಗಿಮನಿ, ತಾಪಂ ಸದಸ್ಯ ಶಿವಣ್ಣ ಗಡಿಯಣ್ಣನವರ, ರೇಣುಕಾ ಮಂಜಪ್ಪ ಚಲವಾದಿ, ತಾಪಂ ಮಾಜಿ ಸದಸ್ಯ ಮಂಜಪ್ಪ ಬೇವಿನಹಳ್ಳಿ, ಮಹೇಂದ್ರ ಬಡಳ್ಳಿ, ಹನುಮಂತಗೌಡ ತಡಕನಹಳ್ಳಿ, ವೀರಭದ್ರಪ್ಪ ಅರ್ಕಾಚಾರಿ, ರಾಮು ಚಿಗಮರದ, ಕರಬಸಪ್ಪ ಹೀರಳ್ಳಿ, ಚಂದ್ರಪ್ಪ ಮಾರವಳ್ಳಿ, ಓದನಗೌಡ ದೊಡ್ಡಗೌಡ್ರ, ಶಂಕ್ರಪ್ಪ ಬೆಳ್ಳುರ, ಧರ್ಮರಾಜ ಬಿಲ್ಲಳ್ಳಿ, ಜಯಪ್ಪ ಭರಮಗೌಡ್ರ, ರಾಜಪ್ಪ ಹಂಚಿನ, ಮಂಜಪ್ಪ ಓಲೇಕಾರ, ರಾಮಪ್ಪ ಹರಿಜನ, ಶೇಖಯ್ಯ ಬಸಾಪುರ, ನಾಗಪ್ಪ ಕುಸಗೂರ ಹಾಜರಿದ್ದರು.