ಇಂದಿನಿಂದ ಆರಾಧನೆ ಮಹೋತ್ಸವ
ಹಾವೇರಿ: ತಾಲೂಕಿನ ಹಾವನೂರು ಗ್ರಾಮದ ವಾದಿರಾಜ ಮೃತ್ತಿಕಾ ವೃಂದಾವನದಲ್ಲಿ ನಂದನನಾಮ ಸಂವತ್ಸರ ಆರಾಧನೆ ಮಹೋತ್ಸವ ಮಾ. 29ರಿಂದ 31ರ ವರೆಗೆ ಜರುಗಲಿದೆ. ಶುಕ್ರವಾರ ಬೆಳಗ್ಗೆ ಪವಮಾನ ಹೋಮ, ಮಧ್ಯಾಹ್ನ ರಥೋತ್ಸವ, ಮಹಾನೈವೇದ್ಯ, ಸಂಜೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ, ಮಹಾಮಂಗಳಾರತಿ ನಡೆಯಲಿದೆ. ಮಾ. 30, 31ರಂದು ಡಾ. ಶ್ರೀನಿವಾಸ ಹಾವನೂರು ದತ್ತಿ ಉಪನ್ಯಾಸ ಜರುಗಲಿದೆ. ಹರಿ ವಾಯು ಗುರುಗಳು ಕುರಿತು ವಿದ್ವಾನ್ ಉಡುಪಿ ಕೃಷ್ಣಾಚಾರ್ಯ, ಪಂಡಿತ ಹರಿಆಚಾರ್ಯ ವಾಳ್ವೇಕರ ಉಪನ್ಯಾಸ ನೀಡುವರು. ಪರಿಮಳಾ ಶ್ರೀನಿವಾಸಮೂರ್ತಿ ಅವರಿಂದ ಭಕ್ತಿ ಸಂಗೀತ, ಶ್ರೀಪಾದ ಗಡ್ಡಿ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಲಿವೆ. ಮಾಹಿತಿಗೆ ಪುರುಷೋತ್ತನಾಚಾರ್ಯ ಗಲಗಲಿ ಮೊ. 9632730899 ಸಂಪರ್ಕಿಸಬಹುದು.