ಕಲೆ, ಸಾಹಿತ್ಯದಿಂದ ನಾಡಿನ ಖ್ಯಾತಿ ವೃದ್ಧಿ
ಶಿಗ್ಗಾಂವಿ: ಪರಂಪರಾಗತವಾಗಿ ಬಂದಿರುವ ರಂಗಭೂಮಿ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ನಾಡಿನ ಖ್ಯಾತಿ ಹೆಚ್ಚಿಸಲು ಕಾರಣವಾಗಿದೆ ಎಂದು ಹಾವೇರಿ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ಪಂ. ಗಾನಯೋಗಿ ಪುಟ್ಟರಾಜ ಗವಾಯಿಗಳ ಕಲಾವಿದರ ಸಂಘ, ಕರ್ನಾಟಕ ನಾಟಕ ಅಕ್ಯಾಡೆಮಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶ್ವ ರಂಗಭೂಮಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಗ್ರಾಮೀಣ ರಂಗಭೂಮಿ ಕಲೆ, ಸಾಹಿತ್ಯದಷ್ಟು ಮನರಂಜನೆ ನೀಡುವ ಕಲೆ ಬೇರಾವುದಿಲ್ಲ. ನೈಜ ಗುಣಗಳಿಂದ ಅನೇಕ ಕಲಾವಿದರು ಅಭಿನಯಿಸುವ ಮೂಲಕ ಜನಮನದಲ್ಲಿ ಇಂದಿಗೂ ಶಾಶ್ವತರಾಗಿದ್ದಾರೆ. ಅವರ ಅಭಿನಯ ಜನರನ್ನು ರಂಜಿಸುತ್ತಿದ್ದರೂ, ಅದರಲ್ಲಿ ಬದುಕಿಗೆ ಹತ್ತಿರವಾದ ಸಂಗತಿಗಳಿದ್ದವು ಮತ್ತು ಬದುಕಿಗೆ ಹೊಸ ಸಂದೇಶ ಸಾರುತಿದ್ದವು. ಆದರೆ, ಇಂದು ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದಾಗಿ ನೈಜತೆ ದೂರಾಗಿದೆ ಎಂದು ವಿಷಾದಿಸಿದರು.
ಸಾಹಿತಿ ಬ.ಫ. ಯಲಿಗಾರ ರಂಗಭೂಮಿ ಕುರಿತು ಉಪನ್ಯಾಸ ನೀಡಿದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುಟ್ಟರಾಜ ಕಲಾವಿದರ ಸಂಘದ ಅಧ್ಯಕ್ಷ ಕೆ. ಕೊಟ್ರೇಶ ಮಾಸ್ತರ ಬೆಳಗಲಿ ಅಧ್ಯಕ್ಷತೆ ವಹಿಸಿದರು. ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ.ಡಿ. ಯತ್ನಳ್ಳಿ, ಎಂ.ಜಿ. ಹಳೆಮನಿ, ಕಲಾವಿದ ಎಚ್.ಎನ್. ಸುಣಗುಂದ, ಎಸ್.ಎನ್. ಮುಗಳಿ, ಎಸ್.ಕೆ. ಹೂಗಾರ, ಚನ್ನಪ್ಪ ಮೇಟಿ, ವಿ.ಎಸ್. ಬಗಾಡೆ, ಜಿ.ಎಂ. ಕುಂಕೂರ, ಎಸ್.ವೈ. ಇಂಗಳಗಿ, ಮಹೇಶಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಕಲಾವಿದರ ಸಂಘದ ಅಧ್ಯಕ್ಷ ಫಕ್ಕೀರೇಶ ಕೊಂಡಾಯಿ, ಸ್ವಾತಂತ್ರ್ಯ ಯೋಧ ರಾಮಚಂದ್ರಪ್ಪ ಅರ್ಕಾಚಾರಿ, ಕಲಾವಿದ ಇಮಾಮಸಾಬ ನದಾಫ್, ಕಲಾಪೋಷಕ ಭರಮಜ್ಜ ನವಲಗುಂದ, ಶಿವಾಜಿ ಶಿಂದೆ, ಸಂಗಪ್ಪ ಉಳ್ಳಾಗಡ್ಡಿ, ಈಶ್ವರ ಪಾಟೀಲ, ನಾಗರಾಜ ಬ್ರಹ್ಮಾವರ, ಟಾಕನಗೌಡ ಪಾಟೀಲ, ಸುಭಾಸ ಚವ್ಹಾಣ, ಮಂಜುನಾಥ ಮಣ್ಣಣ್ಣವರ, ಬಸವರಾಜ ಮಿರ್ಜಿ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು