ಗುರುಶಾಂತಪ್ಪ ಜಾಬಿನ ದತ್ತಿ ಉಪನ್ಯಾಸ ಕಾರ್ಯಕ್ರಮ
ಹಾವೇರಿ: ಇಲ್ಲಿನ ಹುಕ್ಕೇರಿಮಠ ಡಿ.ಇಡಿ ಕಾಲೇಜಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ. ಗುರುಶಾಂತಪ್ಪ ಜಾಬಿನ ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಪತ್ರಾಂಕಿತ ಅಧಿಕಾರಿ ಕೆ.ಎಂ. ನೀಲಕಂಠಪ್ಪ ಮಾನವ ಜೀವನದ ಮೌಲ್ಯಗಳು ವಿಷಯ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಐವರ ಹೆಸರಿನಿಂದ ರು. 50 ಸಾವಿರ ಕೊಡುಗೆಯಾಗಿ ನೀಡಿದ ಜಿಲ್ಲೆಯ ಪ್ರಥಮ ವ್ಯಕ್ತಿ ಗುರುಶಾಂತಪ್ಪ ಜಾಬಿನ. ಇದು ಸ್ವಾತಂತ್ರ್ಯ ಹೋರಾಟಗಾರನಿದ್ದ ಸಾಹಿತ್ಯದೆಡೆಗಿದ್ದ ಒಲವು, ಮೌಲ್ಯಗಳನ್ನು ಎತ್ತಿ ತೋರಿಸುತ್ತವೆ ಎಂದರು.
ದತ್ತಿ ದಾನಿಗಳನ್ನು ಎಚ್.ಆರ್. ಹೊಸಮನಿ ಪರಿಚಯಿಸಿದರು. ಲಲಿತಮ್ಮ ಗುರುಶಾಂತಪ್ಪ ಜಾಬಿನ, ಎಚ್.ಎಸ್. ಚಿನ್ನಿಕಟ್ಟಿ, ಹಿರಿಯ ಸಾಹಿತಿ ಗಂಗಾಧರ ನಂದಿ, ಸಿ.ಎಸ್. ಮರಳಿಹಳ್ಳಿ, ಜಿ.ಎನ್. ಹೂಗಾರ, ಕೆ.ಆರ್. ನಾಶೀಪುರ, ಶಿವಬಸಪ್ಪ ಬದ್ರಶೆಟ್ಟರ, ಮಸಲವಾಡ ಗುರುಗಳು ಇದ್ದರು. ಅಕ್ಕಮ್ಮ ಹಾನಗಲ್ಲ ಪ್ರಾರ್ಥಿಸಿದರು. ಸಿ.ಎನ್. ದೊಡ್ಡಗೌಡರ ಸ್ವಾಗತಿಸಿದರು. ನಾಗರಾಜ ದೇಸಳ್ಳಿ ನಿರೂಪಿಸಿದರು.