ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜಾಗೃತ ದಳ ಕಾರ್ಯಕ್ಕೆ ನೋಡಲ್ ಅಧಿಕಾರಿ ನೇಮಕ

Rashmi Kasaragodu
Updated On : 29 Mar 2013, 12:45 pm

ಹಾವೇರಿ: ಜಿಲ್ಲೆಯಲ್ಲಿ ಜರುಗಲಿರುವ 6 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ, ಚುನಾವಣಾ ನೀತಿ ಸಂಹಿತೆ ಕಣ್ಗಾವಲಿಗಾಗಿ ನೇಮಕ ಮಾಡಿಕೊಂಡಿರುವ ಸಂಚಾರಿ ದಳ (ಜಿಟಣ್ಝಟ್ಜಿ ಡಠ್ಡಿಛಜ) ಸ್ಥಿರ ಜಾಗೃತ ದಳ (ಖ್ಡ್ಠಢಜಟಟ್ಝಛಟ್ಛಿಜ ಡಿಜಛಟ), ವಿಡಿಯೋ ದಳ (ಗ್ಝಜಜ್ಟ ಖ್ಡ್ಠಢಜಟಟ್ಝಛಟ್ಛಿಜ ಡಿಜಛಟ), ವಿಡಿಯೋ ವೀಕ್ಷಕ ದಳ (ಗ್ಝಜಜ್ಟ ಗ್ಝಜಢ್ಝಿಟ್ಜಿ ಡಿಜಛಟ)ಗಳ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಯಾಗಿ ಪರೀಕ್ಷಾರ್ಥ ಉಪ ವಿಭಾಗಾಧಿಕಾರಿ ಡಿ.ಎನ್. ಸತೀಶ ಅವರನ್ನು ನೇಮಿಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಆದೇಶ ಹೊರಡಿಸಿದ್ದಾರೆ.
ಎಲ್ಲ ವಿಚಕ್ಷಣ ದಳಗಳು ಸಲ್ಲಿಸುವ ವರದಿ ಹಾಗೂ ದೂರುಗಳನ್ನು ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸುವುದಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ ಒಂದನ್ನು ಸ್ಥಾಪಿಸಲಾಗುತ್ತಿದ್ದು, ಈ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಣೆಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಥಮದರ್ಜೆ ಸಹಾಯಕ ಮಹೇಶ ದೊಡ್ಡಣ್ಣನವರ ಮೊ- 99867 51706 ಹಾಗೂ ದ್ವಿತೀಯ ದರ್ಜೆ ಸಹಾಯಕ ರಾಜು ಮೆಣಸಗಿ-98443 87356 ಅವರನ್ನು ನಿಯೋಜಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement