ನಿರ್ದೇಶಕ ಮಂಡಳಿಗೆ ಸದಸ್ಯರ ಆಯ್ಕೆ
ಕನ್ನಡಪ್ರಭ ವಾರ್ತೆ, ಹಾನಗಲ್, ಮಾ. 29
ಹಾನಗಲ್ಲಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಮೈಲಾರಲಿಂಗೇಶ್ವರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕ ಮಂಡಳಿಯ 11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲೆಯ ಸಹಕಾರಿಗಳ ಉಪನಿಬಂಧಕರ ಕಚೇರಿಯ ಚುನಾವಣಾಧಿಕಾರಿ ಎಸ್.ಎಸ್. ಯತ್ತಿನಮನಿ ಪ್ರಕಟಿಸಿದ್ದಾರೆ.
ದಾನಪ್ಪ ಗಂಟೇರ, ಶಂಬಣ್ಣ ಶೆಟ್ಟರ್, ದಿನೇಶ ಲಮಾಣಿ, ಶಿವಲೀಲಾ ಗಂಟೇರ, ರೇಣುಕಾ ಶೆಟ್ಟರ್, ಬಸವಂತಪ್ಪ ತಳವಾರ, ಗಿರೀಶ ಮುದುಕಣ್ಣನವರ, ಜಗದೀಶ ಮಾಯಣ್ಣನವರ, ಲಕ್ಷ್ಮೀ ಬೊಗಳಿ, ದುರ್ಗಪ್ಪ ಗಡ್ಡೇರ, ಮಂಜುಳಾ ದಿಳ್ಳೆಪ್ಪನವರ ನಿರ್ದೇಶಕ ಮಂಡಳಿ ಸದಸ್ಯರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.