ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಣ್ಣ ಎರಚಿ ರಂಗಿನಾಟವಾಡಿದ ಜನತೆ

Vishwanath S
Updated On : 30 Mar 2013, 11:15 am

ಹಿರೇಕೆರೂರು: ಪಟ್ಟಣದಲ್ಲಿ ವಿವಿಧ ಬಣ್ಣಗಳೊಂದಿಗೆ ರಂಗಿನಾಟದಲ್ಲಿ ಯುವಕರು ಹಾಗೂ ಹಿರಿಯರು ಹೋಳಿ ಹಬ್ಬದ ನಿಮಿತ್ತ ರಂಗ ಪಂಚಮಿ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಹೊರಟ ರತಿ-ಮನ್ಮಥರ ರೂಪಧಾರಿಗಳ ಮೆರವಣಿಗೆ ಹಾಗೂ ಮ್ಯೂಜಿಕ್,ನೊಂದಿಗೆ ಸಿನೆಮಾ ಹಾಡುಗಳಿಗೆ ತಾಳ ಹಾಕುತ್ತಾ ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು. ಭಾರಿ ಜನಸ್ತೋಮದೊಂದಿಗೆ ಸಾಗಿದ ಮೆರವಣಿಗೆ ಹೋಳಿ ಹಬ್ಬ ಶಾಂತಿಯುತವಾಗಿ ನಡೆದು ನೆಮ್ಮದಿ ತಂದಿತು.
ಹೋಳಿ ಬಣ್ಣದಾಟದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಪಟ್ಟಣದಲ್ಲಿ ಜನಸಂಚಾರ ವಿರಳವಾಗಿತ್ತು. ಅಂಗಡಿ-ಮುಗ್ಗಟ್ಟುಗಳು ಮುಚ್ಚಿದ್ದವು. ಸಂಜೆ ವೇಳೆಗೆ ಪುನಃ ಸಹಜ ಸ್ಥಿತಿಗೆ ಮರಳಿತು. ಮುಖ್ಯ ಬೀದಿಯಲ್ಲಿ ಬೆಳಗ್ಗೆ 10ಕ್ಕೆ ಆರಂಭವಾದ ಮೆರವಣಿಗೆ ಬಂಡಿಗಳು ಚಾವಡಿ ವೃತ್ತದ ಮೂಲಕ ಹಾದು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಸರ್ವಜ್ಞ ವೃತ್ತದವರೆಗೆ ಸಾಗಿದವು. ಪುನಃ ಮರಳಿ ಪೇಟೆ ಬಸವೇಶ್ವರ ದೇವಸ್ಥಾನ ಸಮೀಪದಲ್ಲಿ ಸ್ಥಾಪಿಸಿದ ಕಾಮನ ದಹನ ನೆರವೇರಿಸಲಾಯಿತು.
ಕೆಲವರು ಪುಡಿ ಬಣವನ್ನು ಎರಚಿದರೆ, ಇನ್ನು ಕೆಲವರು ಡ್ರಂಗಳಲ್ಲಿ ನೀರಿನಲ್ಲಿ ಮಿಶ್ರ ಮಾಡಿದ ಬಣ್ಣ ಎರಚಿ ಸಂಭ್ರಮಿಸಿದರು. ಯುವಕರು ಮ್ಯೂಜಿಕ್ ಜತೆ ಹಾಡುಗಳಿಗೆ ನರ್ತಿಸುತ್ತ ಬಣ್ಣ ಎರಚಿ ಪರಸ್ಪರ ಗೋಳಾಡಿಸುವ ಮೂಲಕ ರಂಜಿಸಿದರು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರಟ್ಟಿಹಳ್ಳಿ ರಂಗಿನಾಟ: ತಾಲೂಕಿನ ರಟ್ಟಿಹಳ್ಳಿಯಲ್ಲಿ ಹೋಳಿ ಕಾಮಣ್ಣನ ಹಬ್ಬ ವಿಜೃಂಭಣೆಯಿಂದ ನಡೆಯಿತು. ಗ್ರಾಮದಲ್ಲಿ ವಿವಿಧೆಡೆ ಸ್ಥಾಪಿಸಿದ ಕಾಮನ ಮೂರ್ರ್ತಿಗಳನ್ನು ಸುಡುವ ಮೂಲಕ ಹೋಳಿ ಹಬ್ಬ ಶಾಂತಿಯಿಂದ ನಡೆಯಿತು. ಗ್ರಾಮದಲ್ಲಿ ಕುಮಾರೇಶ್ವರ ಶಾಲೆಯ ರಸ್ತೆ, ಭಗತ್,ಸಿಂಗ್ ಸರ್ಕಲ್ ಹಾಗೂ ಬಂಕಾಪುರ ಕ್ರಾಸ್ ಬಳಿ ಕಾಮನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಬೆಳಗ್ಗೆಯಿಂದಲೇ ಬಣ್ಣದಾಟದಲ್ಲಿ ತೊಡಗಿದ ಚಿಣ್ಣರ ಸಂಭ್ರಮ ಮೆರುಗು ನೀಡಿತು. ಹಲಗೆ ವಾದನದೊಂದಿಗೆ ಕಾಮನ ಮೂರ್ತಿಗಳ ಮೆರವಣಿಗೆ ಮೂಲಕ ಬಣ್ಣ ಎರಚುತ್ತಾ ಸಾಗಿದ ಯುವಕರು ಗ್ರಾಮದಲ್ಲಿ ಸಂಚರಿಸಿ ಬಣ್ಣಗಳಲ್ಲಿ ಮಿಂದೆದ್ದರು. ಮಧ್ಯಾಹ್ನ 3 ಗಂಟೆಗೆ ಕಾಮದಹನ ನೆರವೇರಿಸಿದರು. ರಟ್ಟಿಹಳ್ಳಿಯತ್ತ ಜನ ಸಂಚಾರ ವಿರಳವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement