ಬಿಎಸ್,ವೈ ಸಾಧನೆಯಿಂದ ಕೆಜೆಪಿಗೆ ಬಲ: ಬಣಕಾರ
ಹಿರೇಕೆರೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜನಕಲ್ಯಾಣ ಕಾರ್ಯಕ್ರಮಗಳನ್ನು ನೋಡಿ ಮತದಾರರು ಕರ್ನಾಟಕ ಜನತಾ ಪಕ್ಷ ಬೆಂಬಲಿಸುತ್ತಿದ್ದಾರೆ. ತನ್ಮೂಲಕ ಕೆಜೆಪಿ ಗೆಲುವಿಗೆ ಪಣ ತೊಟ್ಟಿದ್ದಾರೆ ಎಂದು ಮಾಜಿ ಶಾಸಕ ಯು.ಬಿ. ಬಣಕಾರ ತಿಳಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಗ್ರಾಮದ ದೇವತೆ ದುರ್ಗಾದೇವಿಗೆ ಶುಕ್ರವಾರ ವಿಶೇಷಪೂಜೆ ಸಲ್ಲಿಸಿ ಅವರು ಪ್ರಚಾರ ನಡೆಸಿದರು.
ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಯತ್ತ ಮುಖ ಮಾಡಿರುವುದನ್ನು ಮನಗಂಡ ಜನತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ, ಅದೂ ಕೆಜೆಪಿಯನ್ನು, ಬೆಂಬಲಿಸುತ್ತಿದ್ದಾರೆ. ಕೇಂದ್ರದಲ್ಲಿ ಡಿಎಂಕೆಯಂತಹ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್,ನ್ನೂ ನಡುಗಿಸಿವೆ. ಈ ಮೂಲಕ ಆಯಾ ರಾಜ್ಯಗಳ ಜನತೆಯ ಹಿತ ಕಾಪಾಡುತ್ತಿವೆ. ರಾಜ್ಯದಲ್ಲಿ ಬಿಎಸ್,ವೈ ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳೇ ಕೆಜೆಪಿಗೆ ಶ್ರೀರಕ್ಷೆಯಾಗಲಿವೆ ಎಂದರು.
ಹಾಡೇ ಕಿರಿಗೇರಿ, ಕಡೂರ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ತೆಂಗಿನ ಕಾಯಿಯ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದರು.
ತಾಲೂಕು ಕೆಜೆಪಿ ಅಧ್ಯಕ್ಷ ಮಹೇಶ ಗುಬ್ಬಿ, ಪಟ್ಟಣ ಪಂಚಾಯಿತಿ ಸದಸ್ಯ ಮಹೇಂದ್ರ ಬಡಳ್ಳಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ದತ್ತಾತ್ರೇಯ ರಾಯ್ಕರ, ಪ್ರಭು ಮಳವಳ್ಳಿ, ಗ್ರಾಮದ ಮುಖಂಡರಾದ ಸಿದ್ದನಗೌಡ ಪಾಟೀಲ, ಗದಿಗೆಪ್ಪ ಯಳಿಹೊಳಿ, ಹನುಮಂತಪ್ಪ ನಂದಿಹಳ್ಳಿ, ಗುಡ್ಡಪ್ಪ ಗೊರವರ, ಶೇಖಪ್ಪ ನಂದಿಹಳ್ಳಿ, ಶಿವಪ್ಪ ನಂದಿಹಳ್ಳಿ, ನಾಗನಗೌಡ ಪಾಟೀಲ, ಪಕ್ಕೀರಗೌಡ ಪಾಟೀಲ, ಎಸ್.ಎನ್. ಬಣಕಾರ ಇತರರಿದ್ದರು.