ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಾಷ್ಟ್ರಪ್ರೇಮ, ದುಶ್ಚಟ ನಿವಾರಣೆ ಜಾಗೃತಿ

Vishwanath S
Updated On : 30 Mar 2013, 11:22 am

ಹಾವೇರಿ: ಸ್ವಾಮಿ ವಿವೇಕಾನಂದ ಯುವ ಸ್ವಯಂಸೇವಾ ಸಂಘದ ಆಶ್ರಯದಲ್ಲಿ 'ವಿವೈಎಸ್,ಎಸ್ ನಡಿಗೆ ಸೇವೆಯೆಡೆಗೆ' ಎಂಬ 4 ದಿನಗಳ ವಿಶೇಷ ಸೇವಾ ಪಾದಯಾತ್ರೆ ಗುರುವಾರ ನಗರದಿಂದ ಆರಂಭವಾಯಿತು.
ನಗರದ ಮುನ್ಸಿಫಲ್ ಹೈಸ್ಕೂಲ್ ಮೈದಾನದಿಂದ ಆರಂಭವಾದ ನಡಿಗೆಯನ್ನು ಅಗಡಿಯ ಪ್ರಗತಿಪರ ರೈತ ನಿಜಲಿಂಗಪ್ಪ ಬಸೇಗಣ್ಣಿ ಚಾಲನೆ ನೀಡಿದರು.
ಈ ಸಂದರ್ಭ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ಯುವ ಸಮುದಾಯ ಸಮಯವನ್ನು ಹಾಳು ಮಾಡುವುದರ ಜತೆಗೆ ದುಶ್ಚಟಗಳ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ಸ್ವಾಮಿ ವಿವೇಕಾನಂದ ಯುವ ಸ್ವಯಂಸೇವಾ ಸಂಘದ ಕಾರ್ಯಕರ್ತರು ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ಅದರಲ್ಲೂ ಗ್ರಾಮೀಣ ಜನರಲ್ಲಿ ರಾಷ್ಟ್ರಪ್ರೇಮ ಹಾಗೂ ದುಶ್ಚಟಗಳ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವುದು ಸಂತಸದ ಸಂಗತಿ ಎಂದರು.
ಸ್ವಾಮಿ ವಿವೇಕಾನಂದ ಯುವ ಸ್ವಯಂಸೇವಾ ಸಂಘದ ಅಧ್ಯಕ್ಷ ತೇಜಪ್ಪ ಮಡಿವಾಳರ ಮಾತನಾಡಿ, ನಗರದಿಂದ ಆರಂಭವಾದ ಪಾದಯಾತ್ರೆ ಮಾ. 31ರಂದು ಕಾಗಿನೆಲೆಯಲ್ಲಿ ಮುಕ್ತಾಯಗೊಳ್ಳಲಿದೆ. ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಬರುವ ಕನಕಾಪುರ, ಚಿಕ್ಕಲಿಂಗದಹಳ್ಳಿ, ಕುರುಬಗೊಂಡ ಗ್ರಾಮಗಳಲ್ಲಿ ಜನರಿಗೆ ಸ್ವಚ್ಛತೆ ಹಾಗೂ ಯುವಕರು, ಶಾಲಾ ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ರಾಷ್ಟ್ರ ಜಾಗೃತಿ ಕುರಿತು ತಿಳಿಸಲಾಗುವುದು ಹಾಗೂ ಉಪನ್ಯಾಸ ಜರುಗುವುದು ಎಂದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಕೃಷಿ ಅಂದು ಇಂದು ವಿಷಯ ಕುರಿತು ಸೋಮಶೇಖರ ಹೊಸಳ್ಳಿ, ಸಮಾಜದಲ್ಲಿ ಯುವಕರ ಪಾತ್ರ ಕುರಿತು ನಿವೃತ್ತ ಶಿಕ್ಷಕ ಹನುಮಂತಪ್ಪ ಗೊಲ್ಲರ ಉಪನ್ಯಾಸ ನೀಡಿದರು. ಪಾದಯಾತ್ರೆಯಲ್ಲಿ ವಿವೈಎಸ್,ಎಸ್ ಕಾರ್ಯದರ್ಶಿ ಗಿರೀಶ ಓಲೇಕಾರ, ಕಾರ್ಯಕರ್ತರಾದ ಶಶಿಧರ ಹೊಸಳ್ಳಿ, ನವೀನ ಬಳಿಗಾರ, ಹನುಮಂತಪ್ಪ ಈಳಗೇರ, ದುರಗಪ್ಪ ಹರಿಜನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement