ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗಾಡಾ ಓಡಿಸುವ ಸ್ಪರ್ಧೆ ರೈತರಿಗೆ ಸ್ಫೂರ್ತಿ

Rashmi Kasaragodu
Updated On : 31 Mar 2013, 12:01 pm

ಶಿಗ್ಗಾಂವಿ: ರೈತ ಬಾಂಧವರು ತಮ್ಮ ಹೊಲ-ಗದ್ದೆಗಳಲ್ಲಿ ಬೇಸಾಯದ ಕೆಲಸಗಳನ್ನು ಮಾಡಿ ತಮ್ಮ ಆರಾಧ್ಯ ದೇವರುಗಳಾದ ಎತ್ತುಗಳನ್ನು ಗಾಡಾ ಓಡಿಸುವ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದುದು ಉತ್ತಮ ಸಂಗತಿ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯ ಮಟ್ಟದ ಭಾರಿ ಗಾಡಾ ಓಡಿಸುವ ಸ್ಪರ್ಧೆ ತಾಲೂಕಿನ ಯತ್ತಿನಹಳ್ಳಿ ತಾಂಡಾ ಹೊಸೂರು ಅಮಕೊಪ್ಪ ಗ್ರಾಮದಲ್ಲಿ ಶ್ರೀ ಸೇವಾಭಾಯಿ ಜಗದಂಬಾ ಯುವಕ ಮಂಡಳಿಯಿಂದ ಜರುಗಿತು.
ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ನೋಡಬೇಕು. ಜಯಶಾಲಿಗಳಾದವರಿಗೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಅಭಿನಂದನೆಗಳನ್ನು ಕೋರಿದ ಇವರು, ಭಾರಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಿದ ಶ್ರೀ ಸೇವಾಭಾಯಿ ಜಗದಂಬಾ ಯುವಕ ಮಂಡಳ ಹಾಗೂ ಹೊಸೂರು ಯತ್ತಿನಹಳ್ಳಿ ಗ್ರಾಮಸ್ಥರು ಹಾಗೂ ತಾಂಡಾದ ಎಲ್ಲ ಹಿರಿಯರು ಉತ್ಸಾಹಿ ಯುವಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಬಹುಮಾನ ವಿತರಣೆ ತುಂಬಾ ಸ್ಪರ್ಧಿಗಳು ಭಾಗವಹಿಸಿದ್ದರಿಂದ ಸಮಯದ ಅಭಾವದಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಕಮಿಟಿಯವರಿಗೆ ಬಹುಮಾನ ವಿತರಣೆ ಮಾಡುವಂತೆ ಕೋರಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷ ಚನ್ನಪ್ಪ ಬಿಂದ್ಲಿ, ಜಿಪಂ ಸದಸ್ಯೆ ಸರೋಜಾ ಆಡಿನ, ತಾಲೂಕು ಬಿಜೆಪಿ ಅಧ್ಯಕ್ಷ ದೇವಣ್ಣಾ ಚಾಕಲಬ್ಬಿ, ಎಪಿಎಂಸಿ ಅಧ್ಯಕ್ಷ ಈರನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಹರ್ಜಪ್ಪ ಲಮಾಣಿ, ಸದಸ್ಯೆ ಉಮಾ ಡವಗಿ, ಅನಂತಪ್ಪ ಛಬ್ಬಿ, ಹೊಸೂರು ಯತ್ತಿನಹಳ್ಳಿ ಅಮಕೊಪ್ಪ ಊರಿನ ಹಾಗೂ ತಾಂಡಾದ ಎಲ್ಲ ಹಿರಿಯರು ಉತ್ಸಾಹಿ ಯುವಕರು ಹಾಗೂ ಸಾವಿರಾರು ಜನತೆ ಗಾಡಾ ಓಡಿಸುವ ಸ್ಪರ್ಧೆ ವೀಕ್ಷಿದರು.
ಬಹುಮಾನ ವಿಜೇತ ಗಾಡಾ: ಗಾಡಾ ಓಡಿಸುವ ಪ್ರಥಮ ಬಹುಮಾನವನ್ನು ಹೊನ್ನಮ್ಮದೇವಿ ಪ್ರಸನ್ನ ಕಳ್ಳಿಹಾಳ ಜಗದೀಶ ಹರಮಗಟ್ಟಿಯವರ ಗಣೇಶ ಎಂಬ ಹೋರಿ ಹಾಗೂ ಮಾಸನಕಟ್ಟಿಯ ಮಲ್ಲಪ್ಪ ಗುಡ್ಡಪ್ಪ ಲಚಮಣ್ಣವರ ಅವರ ಪಕ್ಷಿ ಎಂಬ ಹೋರಿಗೆ ಲಭಿಸಿದ್ದು, ಒಂದು ಜೊತೆ ಜಾತಿ ಹೋರಿಯನ್ನು ಪ್ರಲ್ಹಾದ ಕಲಾಲ ಪ್ರಥಮ ಬಹುಮಾನ ನೀಡಿದರು.
ದ್ವಿತೀಯ ಬಹುಮಾನ ಕಲಘಟಗಿ ತಾಲೂಕಿನ ಪರಸಾಪುರದ ದಾವಲಸಾಬ ಮೌಲಾನವರ ಇವರ ಮೈಲಾರಿ ಎಂಬ ಹೋರಿಗೆ ದೊರಕಿದ್ದು, ಒಂದು ಆಕಳವನ್ನು ಸಚಿವ ಬೊಮ್ಮಾಯಿ ನೀಡಿದರು.
ದಾವಲಸಾಬ್ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸೇವಾಭಾಯಿ  ಜಗದಂಬಾ ಯುವಕ ಮಂಡಳದ ಅಧ್ಯಕ್ಷ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement