ಸಮಯ ಸದ್ಬಳಸಿಕೊಳ್ಳಿ: ಎಸ್.ಎಸ್. ಪಾಟೀಲ
ಹಿರೇಕೆರೂರು: ಪ್ರೌಢ ಶಿಕ್ಷಣದ ಹಂತದಲ್ಲಿಯೇ ವಿದ್ಯಾರ್ಥಿಗಳು ಉನ್ನತ ಗುರಿ ಹಾಗೂ ಉದ್ದೇಶ ಹೊಂದಿ ಅದರ ಸಾಧನೆಗೆ ನಿತ್ಯ ಹಂಬಲಿಸುವ ಮೂಲಕ ಸಮಯದ ಸದ್ಬಳಕೆ ಮಾಡಿಕೊಂಡು ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಮುಖಂಡ ಎಸ್.ಎಸ್. ಪಾಟೀಲ ಸಲಹೆ ಮಾಡಿದರು. ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ಸಿಇಎಸ್ ಶಿಕ್ಷಣ ಸಂಸ್ಥೆಯ ಡಿ.ಆರ್. ತಂಬಾಕದ ಬಾಲಕರ ಪ್ರೌಢಶಾಲೆ ಹಾಗೂ ಸಿಇಎಸ್ ಹೆಣ್ಣುಮಕ್ಕಳ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಬಿಇಓ ಎಂ.ಸಿ. ಆನಂದ ಮಾತನಾಡಿದರು. ವಿವಿಧ ಚಟುವಟಿಕೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಎನ್.ಎನ್. ನಿಂಗನಗೌಡ್ರ, ವಿ.ಎಸ್. ಹೊಗೆಸೊಪ್ಪಿನವರ, ಮುಖ್ಯ ಶಿಕ್ಷಕ ಸಿ.ಆರ್. ಹುಲ್ಲತ್ತಿ, ಆರ್.ಕೆ. ಲಮಾಣಿ, ಹಿರಿಯ ಶಿಕ್ಷಕ ಸಿ.ಕೆ. ಮಾಗನೂರ ಇದ್ದರು. ಗಂಗಾಧರಪ್ಪ ಜಿ.ಎಸ್. ಸ್ವಾಗತಿಸಿದರು. ಎಂ.ಡಿ. ಶೀಮಿಕೆರಿ ನಿರ್ವಹಿಸಿದರು. ದೊಡ್ಡನಿಂಗಪ್ಪನವರ ವಂದಿಸಿದರು.
ಹನುಮಂತಪ್ಪ ನೇಮಕ
ಹಾವೇರಿ: ಬಿಜೆಪಿಯ ಹಾವೇರಿ ಶಹರ ಘಟಕದ ಎಸ್ಸಿ, ಎಸ್ಟಿ ಮೋರ್ಚಾದ ಅಧ್ಯಕ್ಷರಾಗಿ ಇಜಾರಿಲಕಮಾಪುರದ ಹನುಮಂತಪ್ಪ ತಿಪ್ಪಣ್ಣ ನೂಕಾಪುರ ಅವರನ್ನು ನೇಮಕ ಮಾಡಿ ಬಿಜೆಪಿ ಶಹರ ಘಟಕದ ಅಧ್ಯಕ್ಷ ಶಿವಲಿಂಗಪ್ಪ ಕಲ್ಯಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.