ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾನಗಲ್: 1,67,845 ಮತದಾರರು

Rashmi Kasaragodu
Updated On : 31 Mar 2013, 12:01 pm

ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ 1,67,845 ಮತದಾರರು 222 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿನ ದೋಷ ಸರಿಪಡಿಸಿಕೊಳ್ಳಲು ಏ. 7ರ ವರೆಗೆ ಅವಕಾಶ ನೀಡಲಾಗಿದೆ ಎಂದು ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಾಳಿ ತಿಳಿಸಿದರು.
ಶನಿವಾರ ನಗರದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಚುನಾವಣೆ ಅಧಿಕಾರಿಗಳು ಹಾಗೂ ಪಕ್ಷಗಳ ಮುಖ್ಯಸ್ಥರ ಸಭೆಯಲ್ಲಿ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಮುಕ್ತ ಮತದಾನದ ಅಗತ್ಯವನ್ನು ವಿವರಿಸಿದರು.
ಕಟ್ಟುನಿಟ್ಟಿನ ಕ್ರಮ: ನೀತಿ ಸಂಹಿತೆ ಪಾಲನೆ ಕಟ್ಟುನಿಟ್ಟಾಗಿರಬೇಕು. ಯಾವುದೇ ಅಧಿಕಾರಿಗಳು ರಜೆ ಹಾಕುವಂತಿಲ್ಲ. ಅಗತ್ಯ ಸಂದರ್ಭಗಳಲ್ಲಿ ದೂರವಾಣಿ ಮೂಲಕ ಆದೇಶ ನೀಡಲಾಗುತ್ತದೆ. ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡುವಂತಿಲ್ಲ. ಸಭೆ-ಸಮಾರಂಭಗಳ ವಿಡಿಯೋಗ್ರಾಫಿ ಮಾಡಲಾಗುತ್ತದೆ. ಫ್ಲಾಯಿಂಗ್ ಸ್ಕ್ವಾಡ್ ರಚನೆ ಮಾಡಲಾಗಿದೆ.
ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಿ: ಅಬಕಾರಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು, ವೀಕ್ಷಣಾ ತಂಡಗಳನ್ನು ರಚಿಸಲಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಬಳಸುವ ವಾಹನಗಳ ಪರವಾನಗಿ ಪಡೆಯಲೇಬೇಕು. ಪ್ರಚಾರ ಸಭೆಗಳಿಗೂ ಪರವಾನಗಿ ನೀಡಲಾಗುವುದು.
ಚುನಾವಣೆಗೆ ಸಂಬಂಧಿಸಿದಂತೆ ಪ್ರತಿದಿನ ಅಧಿಕಾರಿಗಳ ಸಭೆ ನಡೆಯುವವು. ಅಧಿಕಾರಿಗಳು ಕೂಡ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಈ ಬಾರಿ ಯಾವುದೇ ಪಕ್ಷಗಳು ಮತದಾರರ ಚೀಟಿಯನ್ನು ನೀಡುವ ಅಗತ್ಯವಿಲ್ಲ. ಚುನಾವಣಾ ಸಮಿತಿಯೇ ದೂರು ಸಲ್ಲಿಸಿ
ಎಲ್ಲ ಮತದಾರರ ಮನೆಗಳಿಗೆ ಮತದಾನದ ಚೀಟಿ ತಲುಪಿಸುವ ವ್ಯವಸ್ಥೆ ಮಾಡಿದೆ. ಅಲ್ಲದೆ ಮತದಾನ ಕೇಂದ್ರದ ಹತ್ತಿರ ಯಾವುದೇ ಪಕ್ಷಗಳು ಟೆಂಟ್ಗಳನ್ನು ಹಾಕುವಂತಿಲ್ಲ. ಎಲ್ಲಿಯೂ ಕಟೌಟಗಳನ್ನು ನಿಲ್ಲಿಸುವಂತಿಲ್ಲ. ನೀತಿ ಸಂಹಿತೆ ಉಲ್ಲಂಘನೆಯಾದರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು.
ನಿಗಾ ವಹಿಸಿ: ವಿಧಾನಸಭೆ ಚುನಾವಣೆಗೆ ಪ್ರತಿ ಅಭ್ಯರ್ಥಿಗೆ ರು. 16 ಲಕ್ಷ ಚುನಾವಣಾ ವೆಚ್ಚ ನಿಗದಿಪಡಿಸಲಾಗಿದೆ. ಎಲ್ಲ ಅಭ್ಯರ್ಥಿಗಳು ಲೆಕ್ಕದ ವಿಷಯದಲ್ಲಿ ಕಟ್ಟುನಿಟ್ಟಾಗಿ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕು. ಅಲ್ಲದೇ ದೊಡ್ಡ ಮೊತ್ತದ ಹಣವನ್ನು ಬ್ಯಾಂಕುಗಳಿಂದ ವ್ಯವಹಾರ ಮಾಡುವವರ ಮೇಲೂ ಚುನಾವಣಾ ಅಧಿಕಾರಿಗಳು ನಿಗಾ ಇಡಲಿದ್ದಾರೆ ಎಂದರು.
ಮತದಾರರ ಪ್ರಮಾಣ: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಶೇ. 99.36ರಷ್ಟು ಮತದಾರರ ಚುನವಣಾ ಗುರುತಿನ ಚೀಟಿ ನೀಡಲಾಗಿದೆ. 78,374 ಮಹಿಳಾ, 89469 ಪುರುಷ ಮತದಾರರು, ಒಟ್ಟು 1,67,845 ಮತದಾರರು ಈಗಿನ ಲೆಕ್ಕದಂತೆ ಮತದಾನ ಮಾಡಲಿದ್ದಾರೆ. ಏ. 7ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ದೋಷ ನಿವಾರಣೆಗೆ ಅವಕಾಶವಿದೆ. ಹುಲ್ಲತ್ತಿಯಲ್ಲಿ ಒಂದು ಹೆಚ್ಚುವರಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ. 119 ಗ್ರಾಮಗಳಲ್ಲಿ ಒಂದೇ ಮತಗಟ್ಟೆ ಇರುತ್ತವೆ. 34 ಗ್ರಾಮಗಳಲ್ಲಿ 2 ಮತಗಟ್ಟೆ, 8 ಗ್ರಾಮಗಳಲ್ಲಿ 3 ಹಾಗೂ 3 ಗ್ರಾಮಗಳಲ್ಲಿ 4 ಮತಗಟ್ಟೆ ಸ್ಥಾಪಿಸಲಾಗುತ್ತದೆ.
ಈ ವಿಧಾನಸಭಾ ಕ್ಷೇತ್ರದಲ್ಲಿ 56 ಸೂಕ್ಷ್ಮ, 31 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಈ ಬಾರಿ ಬೆಳಗ್ಗೆ 8 ಗಂಟೆಯಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಹೀಗಾಗಿ ಈ ಬಾರಿ ಹಿಂದಿನ ಚುನಾವಣೆಗಿಂತ ಒಂದು ಗಂಟೆ ಅವಧಿ ಕಡಿಮೆಯಾಗಿದೆ. ತಹಸೀಲ್ದಾರ್ ನೇತೃತ್ವದಲ್ಲಿ ಎಂಸಿಸಿ ತಂಡ ರಚಿಸಲಾಗಿದೆ ಎಂದರು.
ಸಭೆಯಲ್ಲಿ ಅಧಿಕಾರಿಗಳಾದ ಬಿ.ವೈ. ಬಂಡಿವಡ್ಡರ, ಕೆ.ಆರ್. ಮಠದ, ಡಾ೤ ರಾಜೇಂದ್ರ ಗೊಡ್ಡೆಮ್ಮಿ, ಎ. ರಮೇಶ, ವಿ.ವಿ. ಸಾಲಿಮಠ, ಬಿ.ಆರ್. ಶೆಟ್ಟರ್, ಡಾ೤ ಚಂದ್ರಪ್ಪ ನರಸಗೊಂಡರ, ಕೃಷ್ಣಪ್ಪ, ಎನ್.ಎಂ. ಪೂಜಾರ, ಡಾ೤ ಎನ್.ಎಫ್. ಕಮ್ಮಾರ, ಕೆಂಗಮ್ಮನವರ ಹಾಗೂ ವಿವಿಧ ಪಕ್ಷಗಳ ಪರ ಬಿ.ಎಸ್. ಅಕ್ಕಿವಳ್ಳಿ, ರಾಜು ಗೌಳಿ, ಸಿ.ಎಸ್. ಬಡಿಗೇರ, ಕೃಷ್ಣ ಬೆಟಗೇರಿ, ಜಗದೀಶ ಕೊಂಡೋಜಿ, ಜಿ.ಬಿ. ಗುಡ್ಡಪ್ಪನವರ, ನಿಂಬಣ್ಣನವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement