ಅಭಿವೃದ್ಧಿ ಕಾರ್ಯ ಬೊಮ್ಮಾಯಿ ಗೆಲವಿಗೆ ಶ್ರೀರಕ್ಷೆ
ಶಿಗ್ಗಾಂವಿ: ಸವಣೂರು ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಅವರ ಪತ್ನಿ ಚನ್ನಮ್ಮ ಬೊಮ್ಮಾಯಿ ಅವರು ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನ, ಜಯನಗರ, ಹಳೆಪೇಟೆ ಇನ್ನಿತರ ಕಡೆ ನೂರಾರು ಮಹಿಳೆಯರೊಂದಿಗೆ ಪಾದಯಾತ್ರೆ ಮೂಲಕ ಮತ ಯಾಚಿಸಿದರು.
ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸಿದ ಚನ್ನಮ್ಮ ಬೊಮ್ಮಾಯಿ, ಪತಿ ಸಚಿವ ಬಸವರಾಜ ಬೊಮ್ಮಾಯಿ 5 ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ನೆನಪಿಸಿಕೊಡುವ ಮೂಲಕ ಮತ ಯಾಚಿಸಿದರು.
ಐವತ್ತು ವರ್ಷ ಆಗದ ಕೆಲಸಗಳನ್ನು ಐದು ವರ್ಷದಲ್ಲಿ ಮಾಡಿರುವ ಮಹಿಳೆಯರಿಗೆ ಸ್ವ-ಸಹಾಯ ಸಂಘದವರಿಗೆ ಜೀವನ ವಿಮೆ ಮಾಡಿರುವುದು, ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳೇ ನನ್ನ ಪತಿ ಬಸವರಾಜ ಬೊಮ್ಮಾಯಿ ಗೆಲುವಿಗೆ ಶ್ರೀ ರಕ್ಷೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಚನ್ನಮ್ಮ ಬೊಮ್ಮಾಯಿ, ಸಾಮಾಜಿಕ ನ್ಯಾಯದಡಿ ರಾಜಕಾರಣ ಮೈಗೂಡಿಸಿಕೊಂಡಿರುವ ಪತಿ ಬಸವರಾಜ ಬೊಮ್ಮಾಯಿ ಜನಸಾಮಾನ್ಯರಲ್ಲಿ ಒಂದಾಗಿ ಬದುಕಿದವರು ಎಂದರು.
ಸ್ತ್ರೀಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಸುಶೀಲಕ್ಕ ಪಾಟೀಲ, ಮಂಗಳಾ ಹೆಸರೂರ, ಶ್ಯಾಮಲಾ ಭ್ರಮ್ಮಾವರ, ವಿಜಯಕ್ಕ ಹೆಸರೂರ, ಉಷಾ ಪಾಟೀಲ, ಭಾರತಿ ರಾಮಾಪುರಮಠ, ಜಯಶ್ರೀ ಉಪಸ್ಥಿತರಿದ್ದರು.