ಅಲ್ಪಸಂಖ್ಯಾತರ ಒಲವು ಕೆಜೆಪಿಗೆ: ಉದಾಸಿ
ಹಾನಗಲ್ಲ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಅಲ್ಪಸಂಖ್ಯಾತ ಸಮದಾಯಕ್ಕೆ ಹೆಚ್ಚಿನ ಅನುದಾನ ನೀಡಿದ್ದರಿಂದಾಗಿ ಈ ಸಮುದಾಯ ಉಳಿದೆಲ್ಲ ಪಕ್ಷಗಳ ಮೇಲೆ ವಿಶ್ವಾಸ ಕಳೆದುಕೊಂಡು ಕೆಜೆಪಿ ಬೆಂಬಲಿಸಲು ಮುಂದಾಗಿದೆ ಎಂದು ಮಾಜಿ ಸಚಿವ, ಹಾನಗಲ್ಲ ವಿಧಾನಸಭಾ ಅಭ್ಯರ್ಥಿ ಸಿ.ಎಂ. ಉದಾಸಿ ಹೇಳಿದರು.
ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಗಮನಿಸಿದ ಬಿಎಸ್‌ವೈ ಉರ್ದು ಪ್ರಾಥಮಿಕ, ಪ್ರೌಢಶಾಲೆಗಳನ್ನು ಆರಂಭಿಸಿದ್ದಲ್ಲದೆ ಪ್ರತಿ ವಿದ್ಯಾರ್ಥಿಗಳಿಗೆ ತಲಾ ರು. 1000 ಶಿಷ್ಯವೇತನ ನೀಡಿದ್ದಾರೆ. ಮುಸ್ಲಿಂ ಬಾಂಧವರು ಹಿಂದಿನ ಸರ್ಕಾರಗಳಿಗೂ ಹಾಗೂ ಯಡಿಯೂರಪ್ಪನವರ ಆಡಳಿತಾವಧಿ ಪರಾಮರ್ಶಿಸಿ ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹಾನಗಲ್ಲ ನವನಗರದ ಫಾರೋಕಿಯಾ ಕಮಿಟಿ ಅಧ್ಯಕ್ಷ ಮುಜಫರ ದೇವಸೂರ, ಸದಸ್ಯರಾದ ಮುಸ್ತಾಖಹ್ಮದ ಸೌದಾಗಾರ, ಇಮ್ತಾಜಹ್ಮದ ನಾಲಬಂದ, ಮಲ್ಲಿಕ ದೇವಸೂರ, ಮಖಬುಲ್ ಬೋರಗಲ್, ಮುಜಫರ ಮೋಗಿ, ಜಮೀರ ಮೋಗಿ, ರಾಜೇಸಾಬ ಅಕಸರ, ಸಮದಾನಿ ಲಕ್ಷ್ಮೇಶ್ವರ, ಸಾದಿಖ ಹಿತ್ತಲಮನಿ, ಮೈನುದ್ದೀನ ಹಾವಣಗಿ ಇತರರು ಕಾಂಗ್ರೆಸ್, ಜೆಡಿಎಸ್ ತೊರೆದು ಉದಾಸಿ ನೇತೃತ್ವದಲ್ಲಿ ಕೆಜೆಪಿ ಸೇರ್ಪಡೆಗೊಂಡರು.
ಸೇರ್ಪಡೆ: ತಾಲೂಕಿನ ಗಾಜೀಪುರ ಗ್ರಾಮದ ಮೈನುದ್ದೀನ ಮುಲ್ಲಾ, ಅಖ್ತರಹ್ಮದ್ ಪಠಾಣ, ನಿಸಾರ ಅಹ್ಮದ್ ಸವಣೂರ, ಮೈನೊ ಸವಣೂರು, ಸತ್ತರಹ್ಮದ್ ದರ್ಗಾ, ರಬ್ಬಾನಿ ಮಕಾನದಾರ, ಶುಕುರ ಹಾನಗಲ್ಲ, ತೌಸಿಫ್ ಪೀರಜಾದೆ, ಮಖಬುಲ್ ಅಹ್ಮದ್ ಸವಣೂರ, ಮಹ್ಮದ ಹನೀಫ್ ಓಣಿಕೇರಿ, ಉಮೇಶ ರಾವಳ, ಮಂಜು ರಾವಳ, ಹುಸೇನ ಮುಲ್ಲಾ, ಮೆಹಮೂದ್ ಮಕಾನದಾರ, ಗೌಸಪೀರ ಮಕಾನದಾರ, ಮದನಿ ಮಕಾನದಾರ, ಮುಜಾಫರ ಸವಣೂರ, ಹನುಮಂತ ರಾವಳ, ಮಲ್ಲೇಶಿ ರಾವಳ, ವಿನೋದ ರಾವಳ, ಸಾದಿಕ ಮಕಾನದಾರ, ಅಬ್ದುಲರಜಾಕ ಮುಲ್ಲಾ, ಸಾದಿಕ ಮಕಾನದಾರ, ಸಾದಿಕ ಮುಲ್ಲಾ ಜೆಡಿಎಸ್ ಪಕ್ಷ ತೊರೆದು ಕರ್ನಾಟಕ ಜನತಾ ಪಕ್ಷಕ್ಕೆ ಸೇರಿದರು.
ಹಾನಗಲ್ಲಿನ ಮಹ್ಮದಜಬೀರ ಮುಲ್ಲಾ, ಶಕೀಲಹ್ಮದ್ ಚುಡಿಗಾರ, ರಫಿಕಹ್ಮದ ಚುಡಿಗಾರ, ಮುಸ್ತಾಖಹ್ಮದ್ ಕುಬಟೂರ, ಹಸನ ಹಾವಣಗಿ, ರಫಿಖಹ್ಮದ ಅತ್ತಾರ, ಜಾಕೀರಹ್ಮದ ಅತ್ತಾರ, ಅಬ್ದುಲರಶೀದ ಅತ್ತಾರ, ಇಬ್ರಾಹಿಮ್ ಅತ್ತಾರ, ಯೂನಸ್ ಅತ್ತಾರ, ನೂರಹ್ಮದ ಅತ್ತಾರ, ಅಬ್ದಲ್‌ರಹೀಮ ಅತ್ತಾರ, ಮಹ್ಮದ ಹುಸೇನ ಅತ್ತಾರ, ಮಹ್ಮದ ಶರೀಫ ಡೊಳ್ಳೇಶ್ವರ, ದಾದಾಪೀರ ಅತ್ತಾರ, ಖಲಂದರ ಲೋಹಾರ, ಜನಾಬ ಮೌಲಾಲಿಸಾಬ ಪಾಳಾ, ಅಹ್ಮದರಾಜಾ ಶೇಖ, ಮೈನುದ್ದೀನ ಆಡೂರ, ದಾದಾಪೀರ ಅತ್ತಾರ, ಜಬೀರ ಮೊಕಾಶಿ ಕೆಜೆಪಿ ಸೇರಿದರು.
ಎಸ್.ಕೆ. ಪೀರಜಾದೆ, ಕಲ್ಯಾಣಕುಮಾರ ಶೆಟ್ಟರ, ಹಸೀನಾಬಿ ನಾಯ್ಕನವರ, ಮಹ್ಮದ ಮತೀನ ಶಿರಬಡಗಿ, ಎ.ಎಸ್. ಬಳ್ಳಾರಿ, ಬಿ.ಎಸ್. ಅಕ್ಕಿವಳ್ಳಿ, ರಾಜು ಗೌಳಿ, ಚಮನಸಾಬ ಕಿತ್ತೂರ ಇತರರು ಇದ್ದರು.