16 ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರ
ಹಿರೇಕೆರೂರು: ಅಲ್ಲಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ಹೊರತಾಗಿ ತಾಲೂಕಿನಲ್ಲಿ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, 16 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.
ಬೆಳಗ್ಗೆಯಿಂದಲೇ ಜನತೆ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಹಳ್ಳಿಗಳಲ್ಲಿ ಮತದಾನ ಚುರುಕಾಗಿತ್ತು. ವರಹ ಹಾಗೂ ಚಿಕ್ಕಬೂದಿಹಾಳ ಗ್ರಾಮಗಳಲ್ಲಿ ನಿಧಾನ ಪ್ರಕ್ರಿಯೆಯಿಂದಾಗಿ ಸಂಜೆ 7ರ ವರೆಗೂ ಮತದಾನ ಮುಂದುವರೆದಿತ್ತು.
ಪಟ್ಟಣದ ರಾಘವೇಂದ್ರ ಕಾಲನಿ ನಿವಾಸಿ ವಿನಾಯಕ ಟಿ., ಯೋಗ್ಯ ಅಭ್ಯರ್ಥಿ ಕಣದಲ್ಲಿ ಇಲ್ಲ ಎಂದು ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸದೆ ಮತ ನಿರಾಕರಣೆ ಮಾಡಿದರು.