ಅಧಿಕ ಅಂತರದಿಂದ ಗೆಲುವು: ಬಣಕಾರ
ಹಿರೇಕೆರೂರು: ವಿಧಾನಸಭಾ ಚುನಾವಣೆಗೆ ತಾಲೂಕಿನ ಸ್ವಗ್ರಾಮ ಚಿಕ್ಕೋಣ್ತಿ ಗ್ರಾಮದ ಮತಕೇಂದ್ರದಲ್ಲಿ ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಮತ ಚಲಾಯಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜಾರಿಗೊಳಿಸಿದ ಹಲವಾರು ಯೋಜನೆಗಳು ನನ್ನ ಗೆಲುವಿಗೆ ಕಾರಣವಾಗಲಿವೆ.
ನಾನು ಮೊದಲ ಬಾರಿಗೆ 1994ರಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ನಂತರ ನಡೆದ ಮೂರು ಚುನಾವಣೆಯಲ್ಲಿ ಬೇರೆ ಬೇರೆ ಕಾರಣಗಳಿಂದ ನಿರೀಕ್ಷಿತ ಫಲಿತಾಂಶ ಲಭ್ಯವಾಗಿರಲ್ಲಿಲ್ಲ. ಆದರೆ, ಈ ಬಾರಿ ಜನತೆ ಬದಲಾವಣೆ ಬಯಸಿ ನನ್ನನ್ನು ಭಾರಿ ಅಂತರದಿಂದ ಗೆಲ್ಲಿಸುವ ಮೂಲಕ ಅವರ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.