ಎಸ್ಸೆಸ್ಸೆಲ್ಸಿ: ಹಾನಗಲ್ಲಗೆ ಶೇ. 84.65 ಫಲಿತಾಂಶ
ಹಾನಗಲ್ಲ: ತಾಲೂಕಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ. 84.65ರಷ್ಟಾಗಿದೆ. ಒಂಭತ್ತು ಪ್ರೌಢಶಾಲೆಗಳಿಗೆ ಶೇ. 100 ಫಲಿತಾಂಶ ಪ್ರಾಪ್ತವಾಗಿದೆ.
ಹಾನಗಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯ ಬೀನಾ ಕುರಡೇಕರ (ಶೇ. 95.36), ರೋಶನಿ ಪ್ರೌಢಶಾಲೆಯ ಐಶ್ವರ್ಯಾ ಹಿರೇಮಠ (94.08), ಹಳ್ಳೀಬೈಲ ಮೊರಾರ್ಜಿ ವಸತಿ ಶಾಲೆಯ ನಿವೇದಿತಾ ಎಸ್. ಹಾಗೂ ಮೇಘಾ ಪಿ. ಗರಿಷ್ಠ ಅಂಕಗಳ ಸಾಧನೆ ಮಾಡಿದ್ದಾರೆ.
ತಾಲೂಕಿನಲ್ಲಿ 1116 ಬಾಲಕರು ಹಾಗೂ 1410 ಬಾಲಕಿಯರು ಸೇರಿ 2984 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2526 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 990 ವಿದ್ಯಾರ್ಥಿಗಳು ಪ್ರಥಮ, 656 ದ್ವಿತೀಯ ಹಾಗೂ 877 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ. 1.65ರಷ್ಟು ಏರಿಕೆಯಾಗಿದೆ.
ಹಾನಗಲ್ಲಿನ ಕುಮಾರೇಶ್ವರ ಪ್ರೌಢಶಾಲೆ, ನರೇಗಲ್ಲಿನ ಸರ್ಕಾರಿ ಉರ್ದು ಪ್ರೌಢಶಾಲೆ, ಹಿರೇಬಾಸೂರಿನ ಸರ್ಕಾರಿ ಪ್ರೌಢಶಾಲೆ, ಶೇಷಗಿರಿ ಸರ್ಕಾರಿ ಪ್ರೌಢಶಾಲೆ, ಹಳ್ಳಿಬೈಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿರವಾಡಿಯ ಸಿದ್ಧರಾಮೇಶ್ವರ ಪ್ರೌಢಶಾಲೆ, ಗೊಂದಿಯ ವರದಾ ಪ್ರೌಢಶಾಲೆ, ಹಾನಗಲ್ಲಿನ ರೋಶನಿ ಪ್ರೌಢಶಾಲೆ, ಚಿಕ್ಕಾಂಶಿ ಹೊಸೂರಿನ ಸರ್ಕಾರಿ ಪ್ರೌಢಶಾಲೆಗಳು ಶೇ. 100 ಫಲಿತಾಂಶ ಗಳಿಸಿವೆ.