ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾನೂನು ತಿದ್ದುಪಡಿ: 10ಕ್ಕೆ ಪ್ರತಿಭಟನೆ

Vishwanath S
Updated On : 8 May 2013, 3:37 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 7
ದೇಶದ ಸಗಟು ಮತ್ತು ಚಿಲ್ಲರೆ ಔಷಧಿ ವ್ಯಾಪಾರಸ್ಥರಿಗೆ ಔಷಧಿ ಉತ್ಪಾದನಾ ಕಂಪನಿಯವರು ನೀಡುತ್ತಿದ್ದ ಲಾಭಾಂಶವನ್ನು ಕಡಿತಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ನೇ ವರ್ಷದ ಕಾನೂನು ತಿದ್ದುಪಡಿ ವಿರೋಧಿಸಿ ಮೇ 10ರಂದು ಹಾವೇರಿ ಜಿಲ್ಲಾದ್ಯಂತ ಎಲ್ಲಾ ತಾಲೂಕಿನಲ್ಲಿರುವ ಔಷಧಿ ಅಂಗಡಿಗಳನ್ನು ಬಂದ್ ಮಾಡಿ ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಜಿಲ್ಲಾ ಔಷಧ ವ್ಯಾಪಾರಸ್ಧರ ಸಂಘದ ಅಧ್ಯಕ್ಷ ರಾಜೆಂದ್ರ ಈರಕಲ್ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ 20 ವರ್ಷಗಳಿಂದ ಇಲ್ಲಿಯವರೆಗೂ ಔಷಧ ವ್ಯಾಪಾರಸ್ಥರೆಂದು ಗುರುತಿಸಿಕೊಂಡಿದ್ದ ಸಗಟು ವ್ಯಾಪಾರಸ್ಥರಿಗೆ ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ ದೇಶದ ಔಷಧಿ ಉತ್ಪಾದನಾ ಕಂಪನಿಯವರು ನೀಡುತ್ತಿದ್ದ ಕಮಿಷನ್ ಆಧಾರದ ಮೇಲೆಯೇ ಹಲವಾರು ವ್ಯಾಪಾರಸ್ಥರು ನಿಶ್ಚಿಂತೆಯಿಂದ ತಮ್ಮ ಜೀವನ ನಡೆಸಲು ಅನುಕೂಲವಾಗಿತ್ತು.
20 ವರ್ಷಗಳಿಂದ ದೇಶದ ಔಷಧ ವ್ಯಾಪಾರಸ್ಥರು ತೊಂದರೆಯಿಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸಮಯ ಕೇಂದ್ರ ಸರ್ಕಾರ ಔಷಧಿ ಉತ್ಪಾದನಾ ಕಂಪನಿಗಳೊಂದಿಗೆ ಗುಟ್ಟಾಗಿ ಮಾತುಕತೆ ನಡೆಸಿ ಸ್ವಾರ್ಥ ಸಾಧನೆಗಾಗಿ ಔಷಧಿ ಉತ್ಪಾದನಾ ಕಂಪನಿಯವರಿಂದ ಲಾಭ ಪಡೆಯುವುದಕ್ಕಾಗಿ 2013ನೇ ತಿದ್ದುಪಡಿಯನ್ನು ಜಾರಿಗೆ ತಂದಿದೆ ಎಂದು ದೂರಿದ್ದಾರೆ.
ವ್ಯಾಪಾರಸ್ಥರು ಹಾಗೂ ಕಾರ್ಮಿಕರು ತಮ್ಮ ಹೊಟ್ಟೆ ಮೇಲೆ ತಣ್ಣಿರಿನ ಭಟ್ಟೆ ಕಟ್ಟಿಕೊಂಡು ಕಣ್ಣಿರು ಸುರಿಸುತ್ತಾ ಔಷಧಿ ಅಂಗಡಿಗಳ ಬಾಗಿಲು ಮುಚ್ಚುವಂತಹ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಮೇ 10ರಂದು ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ಸುಮಾರು 450 ಅಂಗಡಿಗಳ ಮಾಲೀಕರು ಮತ್ತು ಕಾರ್ಮಿಕರು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟಿಸಲು ನಿರ್ಧರಿಸಿದ್ದೆವೆಂದು ಅಧ್ಯಕ್ಷ ಈರಕಲ್ ತಿಳಿಸಿದರು.
ಈ ವೇಳೆ ಕಾರ್ಯದರ್ಶಿ ವಿನೋದ ಕೊಟ್ಟೂರು, ತಾಲೂಕು ಅಧ್ಯಕ್ಷ ರಾಮನಗೌಡ ಕಲ್ಲಪ್ಪಗೌಡ್ರ, ಸದಸ್ಯರಾದ ಎಂ.ಎಸ್. ಕೊಟ್ಟೂರು, ಸತೀಶ ಹೂಳೆಬಾಗಿಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement