ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಫಲಿತಾಂಶ: ಶಿಗ್ಗಾಂವಿಗೆ 6ನೇ ಸ್ಥಾನ

Vishwanath S
Updated On : 8 May 2013, 3:35 am

ಶಿಗ್ಗಾಂವಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕು ಶೇ. 81.49ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ 6ನೇ ಸ್ಥಾನ ಪಡೆದಿದೆ. ನೂರಕ್ಕೆ ನೂರರಷ್ಟು ನಾಲ್ಕು ಪ್ರೌಢಶಾಲೆ ಪಡೆದರೆ, ಉಳಿದವು ಸಾಮಾನ್ಯ ಸ್ಥಾನದಲ್ಲಿ ಫಲಿತಾಂಶವನ್ನು ಪಡೆದಿದೆ. ಪಟ್ಟಣದ ಜೆಎಂಜೆ ಪ್ರೌಢಶಾಲೆ, ಕುನ್ನೂರ ಸರ್ಕಾರಿ ಪ್ರೌಢಶಾಲೆ, ಗಂಜಿಗಟ್ಟಿ ಎಸ್.ಬಿ. ಮೋರಾರ್ಜಿ ದೇಸಾಯಿ ಶಾಲೆ, ಜೆಕ್ಕಿನಕಟ್ಟಿ ಮೊರಾರ್ಜಿ ದೇಸಾಯಿ ಶಾಲೆ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿವೆ. ಕೋಣನಕೇರಿ ಸರ್ಕಾರಿ ಪ್ರೌಢಶಾಲೆ ಎರಡನೆ ಸ್ಥಾನ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಎ. ಭಜಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ಸಲ ಮೂರು ಶಾಲೆಗಳು ಮಾತ್ರ ನೂರರಷ್ಟು ಫಲಿತಾಂಶ ಪಡೆದಿದ್ದವು. ಈ ಬಾರಿ ನಾಲ್ಕು ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿ ತಂದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement