ಬಿಎಜೆಎಸ್ಎಸ್ಗೆ ಶೇ. 79 ಫಲಿತಾಂಶ
ರಾಣಿಬೆನ್ನೂರು: ನಗರದ ಹಲಗೇರಿ ರಸ್ತೆಯಲ್ಲಿರುವ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿಭಾಗದಿಂದ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ 2013ನೇ ವರ್ಷದ ವಾರ್ಷಿಕ ಪರಿಕ್ಷೇಗೆ ಕುಳಿತಿದ್ದ ವಿದ್ಯಾರ್ಥಿಗಳೆಲ್ಲರೂ ಪಾಸಾಗಿ ಒಟ್ಟು ಫಲಿತಾಂಶ ಶೇ. 79ರಷ್ಟಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಶೇ. 79, ಕಲಾ ವಿಭಾಗದಲ್ಲಿ 74.07ರಷ್ಟಾಗಿದೆ.
ವಾಣಿಜ್ಯ ವಿಭಾಗದಿಂದ ಪರಿಕ್ಷೆಗೆ ಕುಳಿತಿದ್ದ ಶಿಲ್ಪಾ ಹರಿಯಾಳದವರ ಹಾಗೂ ಶೋಭಾ ಆರೇರ ಇಬ್ಬರು ಶೇ. 83ರಷ್ಟು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಲಾ ವಿಭಾಗದ ಸರಸ್ವತಿ ಚವ್ಹಾಣ ಶೇ. 81 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.