ಮಲ್ಲಿಕಾರ್ಜುನ ಪ್ರೌಢಶಾಲೆ ಸಾಧನೆ
ಹಿರೇಕೆರೂರು: ತಾಲೂಕಿನ ಹಿರೇಕಬ್ಬಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸತತ 2ನೇ ಬಾರಿಗೆ ನೂರಕ್ಕೆ ನೂರರಷ್ಟು ಆಗಿದೆ. ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 8 ದ್ವಿತೀಯ ಹಾಗೂ 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯೋಪಾಧ್ಯಾಯ ರಾಜಕುಮಾರ ತಳವಾರ ತಿಳಿಸಿದ್ದಾರೆ.
ಉರ್ದು ಶಾಲೆ ಶೇ. 100 ಫಲಿತಾಂಶ
ಹಿರೇಕೆರೂರು: ತಾಲೂಕಿನ ಮಾಸೂರು ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ದಾಖಲೆ ಮಾಡಿದೆ.
ಒಟ್ಟು 24 ವಿದ್ಯಾರ್ಥಿಗಳಲ್ಲಿ 6 ಉನ್ನತ ಶ್ರೇಣಿ, 5 ಪ್ರಥಮ ದರ್ಜೆ, 7 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ ಸುಹೀಲ್ ಅಹ್ಮದ್ ಬಾಳೇಕಾಯಿ (92.48) ಪ್ರಥಮ, ಸುಮಯ್ಯಾಬಾನು ಬಳ್ಳಾರಿ (88.48) ದ್ವಿತೀಯ, ಸೀಮಾ ಹಳ್ಳಳ್ಳಿ (87.68) ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಮುಖ್ಯ ಶಿಕ್ಷಕ ಆರ್.ಐ. ಹಲಗೇರಿ ತಿಳಿಸಿದ್ದಾರೆ. ತಾಲೂಕಿನಲ್ಲಿ ಸರ್ಕಾರಿ ಉರ್ದು ಶಾಲೆ ನೂರರಷ್ಟು ಫಲಿತಾಂಶ ಸಾಧಿಸಿರುವುದು ಇದೇ ಮೊದಲಾಗಿದೆ.
ವೀರಮದಕರಿ ಪ್ರೌಢಶಾಲೆ ಸಾಧನೆ
ರಾಣಿಬೆನ್ನೂರು: ನಗರದ ಗುತ್ತಲ ರಸ್ತೆಯಲ್ಲಿರುವ ವೀರಮದಕರಿ ನಾಯಕ ಹೆಣ್ಣುಮಕ್ಕಳ ಪ್ರೌಢಶಾಲೆಯಿಂದ 2013ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತಿದ್ದ 47 ವಿದ್ಯಾರ್ಥಿನಿಯರಲ್ಲಿ 38 ವಿದ್ಯಾರ್ಥಿನಿಯರು ತೆರ್ಗಡೆಯಾಗಿದ್ದು, 11 ಪ್ರಥಮ, 11 ದ್ವಿತೀಯ, 16 ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಪ್ರೀಯಾ ಮುಗಳಿ 505 ಅಂಕ, ಪುಷ್ಪಾ ಕಬ್ಬೂರ 493 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.