ಲಕ್ಷ್ಮೀ ಹೀರಾಬಾಯಿ ಹಾವೇರಿ ಜಿಲ್ಲೆಗೆ ದ್ವಿತೀಯ
ಶಿಗ್ಗಾಂವಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸ್ಥಳೀಯ ಎಸ್ಬಿಬಿಎಂಡಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿನಿ ಲಕ್ಷ್ಮೀ ಎಂ. ಹೀರಾಬಾಯಿ 625ರಲ್ಲಿ 601 ಅಂಕ (ಶೇ. 96.16) ಪಡೆದು, ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ವಿದ್ಯಾರ್ಥಿನಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಲ್. ಭಜಂತ್ರಿ, ವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ. ಶೃತಿ ರಾಜಾಪುರ ಶೇ. 93.6, ಜೆ. ಮಾಯಾವತಿ ಶೇ. 91.84, ರಾಧಿಕಾ ನವಲಗುಂದ ಶೇ. 91.16, ಪ್ರಸನ್ನ ಯಲಿಗಾರ ಶೇ. 88.6 ಅಂಕ ಗಳಿಸಿದ್ದಾರೆ. ಶಾಲೆಯ 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 42 ದ್ವಿತೀಯ ಹಾಗೂ 71 ವಿದ್ಯಾರ್ಥಿಗಳು ತೃತೀಯ ಶ್ರೇಣಿ ಗಳಿಸಿದ್ದಾರೆ. ಶಾಲೆಯ ಫಲಿತಾಂಶ ಶೇ. 79.09 ಆಗಿದೆ ಎಂದು ಉಪ ಪ್ರಾಚಾರ್ಯ ಜಿ.ಎನ್. ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.