ಕೋಳಿವಾಡ ಗೆಲವು: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 8
ಮೇ 5ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಕೆ.ಬಿ. ಕೊಳಿವಾಡ ಜಯಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ವಿಜೆಯೋತ್ಸವದಲ್ಲಿ ಆಚರಿಸಿದಾಗ ಅಭ್ಯರ್ಥಿ ಭಾಗವಹಿಸಿ ಸಂಭ್ರಮಿಸಿದರು.
ಕೊಳಿವಾಡರು ಗೆಲವು ಸಾಧಿಸಿರುವ ಸುದ್ದಿ ತಿಳಿಯುತ್ತಿದಂತೆಯೇ ಕಾಂಗ್ರೆಸ್ ಕಾರ್ಯಕರ್ತರು, ಬೀದಿಗಳಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಬೈಕ್ ರ್ಯಾಲಿ ನಡೆಸುವ ಮೂಲಕ ಸಂಭ್ರಮಾಚರಣೆ ನಡೆಸಿದ ನಂತರ, ಹಾವೇರಿ ನಗರದಲ್ಲಿ ನಡೆದ ಮತ ಎಣಿಕೆ ಕೇಂದ್ರದಿಂದ ನಗರಕ್ಕಾಗಮಿಸಿದ ಕೆ.ಬಿ. ಕೊಳಿವಾಡರನ್ನು ಕಾಂಗ್ರೆಸ್ ಅಭಿಮಾನಿ ಹಾಗೂ ಕಾರ್ಯಕರ್ತರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಹಾದು ಮೇಡ್ಲೇರಿ ರಸ್ತೆಯ ವಾಗೀಶ ನಗರದಲ್ಲಿರುವ ಅವರ ಮನೆಗೆ ಕರೆದೂಯ್ದರು.
--