ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕ್ಷೇತ್ರ ಅಭಿವೃದ್ಧಿಗಾಗಿ ದುಡಿಯುವೆ

Vishwanath S
Updated On : 10 May 2013, 11:53 am

ಶಿಗ್ಗಾಂವಿ: ಮತದಾರ ಪ್ರಭುಗಳು ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೇವೆಗಾಗಿ ಆಶೀರ್ವದಿಸಿದ್ದು, ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಬಿಜೆಪಿಯಿಂದ ಶಿಗ್ಗಾಂವಿ ಕ್ಷೇತ್ರದಿಂದ ಎರಡನೆ ಬಾರಿಗೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ತಾಪಂ ಸಭಾಭವನದ ಎದುರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂತಸ ಹಂಚಿಕೊಂಡರು. ಬಳಿಕ ಕ್ಷೇತ್ರದ ಕಾರ್ಯಕರ್ತರು ಬಸವರಾಜ ಬೊಮ್ಮಾಯಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ನಿಂಗಣ್ಣ ಜವಳಿ, ವೀರನಗೌಡಾ ಪಾಟೀಲ, ಹನಮಂತಗೌಡ ಯಕ್ಕಿಕೊಪ್ಪ, ಸೋಮಣ್ಣ ಕೊರವಿ, ಸೋಮಣ್ಣ ಹೊರಕೇರಿ, ಶಿವಪ್ಪ ಸಂಕ್ಲಿಪುರ, ಶಿವಾನಂದ ನೀರಲಗಿ, ತಿಪ್ಪಣ್ಣ ದವಲಿ, ಶಂಕ್ರಪ್ಪ ಶಿಸನಳ್ಳಿ, ಇಮಾಮಸಾಬ ಕಡೆಮನಿ, ಬಸಪ್ಪ ದವಲಿ, ಬಸಪ್ಪ ಕಾಡಾಪುರ, ರುದ್ರಪ್ಪ ನೀರಲಗಿ, ಸಿ.ಆರ್. ಪಾಟೀಲ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement