ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತಿಂಗಳ ಅತಿಥಿ ಜತೆ ಪಟ್ಟಂಗ

Vishwanath S
Updated On : 10 May 2013, 11:53 am

ಹಾವೇರಿ: ನಾಡಿನ ಪ್ರಮುಖ ಜನಪದ ಕಲಾವಿದರೊಂದಿಗೆ ವಿದ್ಯಾರ್ಥಿಗಳು, ಸಂಶೋಧಕರು, ತಜ್ಞರು ಸಂವಾದ ನಡೆಸುವ ಮೂಲಕ ಜನಪದ ಕಲಾವಿದರ ಬದುಕು-ಬವಣೆ-ಸಾಧನೆ, ಸಾರ್ಥಕತೆಗಳ ಕುರಿತು ಸತ್ವಪೂರ್ಣ ಮಾತುಕತೆ ನಡೆಸಿ ಅದನ್ನು ಆಡಿಯೋ ಹಾಗೂ ವಿಡಿಯೋದಲ್ಲಿ ದಾಖಲಿಸುವ ಯೋಜನೆಗಾಗಿ ತಿಂಗಳ ಅತಿಥಿಯೊಂದಿಗೆ ಪಟ್ಟಂಗ ಕಾರ್ಯಕ್ರಮ ಮೇ 15ರ ಮಧ್ಯಾಹ್ನ 2ಕ್ಕೆ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ. ಜನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಆಗಮಿಸಲಿದ್ದಾರೆ. ಜಾನಪದ ವಿವಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement