ಇಂದು ಅನ್ನ ಸಂತರ್ಪಣೆ
ರಾಣಿಬೆನ್ನೂರು: ಜೈನ್ ಸಮಾಜದ ಧರ್ಮ ಗುರುಗಳಾದ ಸುವಿಧಿನಾಥರ ಸುವರ್ಣ ಮಹೋತ್ಸವದ ಅಂಗವಾಗಿ ತಾಲೂಕು ಜೈನ್ ಸ್ವೆತಾಂಬರ್ ಸಂಘದ ವತಿಯಿಂದ ಮೇ 11ರಂದು ಮಧ್ಯಾಹ್ನ 12ಕ್ಕೆ ನಗರದ ಸಂಗಮ್ ಚಿತ್ರ ಮಂದಿರದ ಹತ್ತಿರವಿರುವ ಸುವಿಧಿನಾಥ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಿದೆ ಎಂದು ಪ್ರಕಟಣೆ ತಿಳಿಸಿದೆ.