ಕುಮಾರೇಶ್ವರ ಕಾಲೇಜಿಗೆ ಶೇ. 91ರಷ್ಟು ಫಲಿತಾಂಶ
ಹಾನಗಲ್ಲ: ಪಟ್ಟಣದ ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟನ ಕುಮಾರೇಶ್ವರ ಪದವಿಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಶೇ. 91.22ರಷ್ಟಾಗಿದ್ದು, ಪರೀಕ್ಷೆಗೆ ಹಾಜರಾದ 57 ವಿದ್ಯಾರ್ಥಿಗಳಲ್ಲಿ 52 ಮಂದಿ ಪಾಸಾಗಿದ್ದಾರೆ. ಪ್ರಥಮ ಸ್ಥಾನದಲ್ಲಿ 37, ದ್ವಿತೀಯ ಸ್ಥಾನದಲ್ಲಿ 10, ತೃತೀಯ ಸ್ಥಾನದಲ್ಲಿ 5 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಐಶ್ವರ್ಯ ಕೊಪ್ಪದ (ಶೇ. 83.33), ಮೆಹಬೂಬಲಿ ಹಿತ್ತಲಮನಿ (ಶೇ. 83.33) ಕಾಲೇಜಿಗೆ ಪ್ರಥಮ, ಪುಷ್ಪಾ ಪಾಟೀಲ್ (ಶೇ. 83) ದ್ವಿತೀಯ, ಈರಬಸಪ್ಪ ಗಿರಸಿನಕೊಪ್ಪ (ಶೇ. 79.50) ತೃತೀಯ ಸ್ಥಾನ ಗಳಿಸಿದ್ದಾರೆ.ಪರೀಕ್ಷೆಗೆ ಕುಳಿತವರಲ್ಲಿ 3 ವಿಷಯಗಳಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದ್ದು, ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಶೇ. 99, ಇಂಗ್ಲಿಷ್ನಲ್ಲಿ ಶೇ. 96ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಟಿ.ಎನ್. ಕಾಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.