ರಟ್ಟಿಹಳ್ಳಿ ಶಾಲೆ: ಉತ್ತಮ ಫಲಿತಾಂಶ
ಹಿರೆಕೇರೂರು: ಏಪ್ರಿಲ್ನಲ್ಲಿ ನಡೆದ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ರಟ್ಟಿಹಳ್ಳಿಯ ವಿವಿಧ ಶಾಲೆಗಳು ಉತ್ತಮ ಫಲಿತಾಂಶ ಗಳಿಸಿವೆ.
ಕುಮಾರೇಶ್ವರ ಬಾಲಿಕಾ ಪ್ರೌಢಶಾಲೆ: ಇಲ್ಲಿನ ಶ್ರೀ ಕುಮಾರೇಶ್ವರ ಬಾಲಿಕಾ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.94.64ರಷ್ಟು ಫಲಿತಾಂಶ ಗಳಿಸಿದೆ. ಮಮತಾ ಪೂಜಾರ 524 ಅಂಕಗಳು ಮೊದಲ ಸ್ಥಾನ, ದೀಪಾ ಹೊಳಜೋಗಿ 503 ಅಂಕಗಳು ಎರಡನೇ ಸ್ಥಾನ ಮತ್ತು ಸುಬ್ಬಮ್ಮ ಮುಂಡರಗಿ 493 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಲಯನ್ಸ್ ಆಂಗ್ಲ ಮಾಧ್ಯಮ: ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಶೇ. 87ರಷ್ಟು ಫಲಿತಾಂಶ ಗಳಿಸಿದೆ. ಶಾಲೆಯ ಯಶೋಧಾ ಅಮೋಘಿಮಠ ಶೇ. 87ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ, ಸೀಮಾ ಹರವಿ ಶೇ. 84.5ರಷ್ಟು ಅಂಕ ಗಳಿಸಿ ದ್ವಿತೀಯ, ಅಕ್ಷತಾ ಪಾಟೀಲ ಶೇ.82ರಷ್ಟು ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಶ್ರೀ ಕುಮಾರೇಶ್ವರ ಬಾಲಕರ ಪ್ರೌಢಶಾಲೆ ಶೇ.85.71ರಷ್ಟು ಫಲಿತಾಂಶ ಗಳಿಸಿದೆ. ಶಾಲೆಗೆ ವಿನುತಾ ಎಸ್. ಕಿರಿಗೇರಿ ಶೇ. 93.44 ಮೊದಲ ಸ್ಥಾನ, ನಿಧಾಕಾನಂ ಎಂ. ಲೋದಿ ಶೇ. 90.72 ಎರಡನೇ ಸ್ಥಾನ ಮತ್ತು ದೇವರಾಜ ಬಾರ್ಕಿ ಶೇ. 87.33 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸಿದ್ದಲಿಂಗೇಶ್ವರ ಪ್ರೌಢಶಾಲೆ: ರಟ್ಟಿಹಳ್ಳಿಯ ಸಿದ್ದಲಿಂಗೇಶ್ವರ ಪ್ರೌಢಶಾಲೆ ಕಳೆದ ಏಪ್ರಿಲ್ನಲ್ಲಿ ನಡೆದ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಶೇ. 100ರಷ್ಟು ಫಲಿತಾಂಶ ಗಳಿಸಿದೆ. ಶಾಲೆಗೆ ಬಸವರಾಜ ಆರಾಧ್ಯಮಠ ಶೇ.74.4 ಅಂಕ ಗಳಿಸಿ ಶಾಲೆಗೆ ಮೊದಲು, ಆನಂದ ಎಸ್. ಶೇ.70 ದ್ವಿತೀಯ, ನಿರ್ಮಲಾ ಕುಸಗೂರ ಶೇ. 67 ಅಂಕದಿಂದ ತೃತೀಯ ಸ್ಥಾನ ಪಡೆದಿದ್ದಾಳೆ.