ಪಾಠಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ರಾಣಿಬೆನ್ನೂರು: ಇಲ್ಲಿನ ಮೃತ್ಯುಂಜಯ ನಗರದಲ್ಲಿರುವ ಹೊನ್ನಾಳಿ ಚನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ನಿಂದ ಕಳೆದ 11 ವರ್ಷಗಳಿಂದ ಚನ್ನೇಶ್ವರ ಮಠದಲ್ಲಿ ನಡೆಯುತ್ತಿರುವ ಜಗದ್ಗುರು ವಾಗೀಶ ಪಂಡಿತಾರಾಧ್ಯ ಧಾರ್ಮಿಕ ಪಾಠಶಾಲೆಯ 2013-14ನೇ ಸಾಲಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತರು ಮೇ 31ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಪ್ರವೇಶ ಬಯಸುವ ವಿದ್ಯಾರ್ಥಿಗಳು 7ನೇ ತರಗತಿಯಲ್ಲಿ ಪಾಸಾಗಿರಬೇಕು. 18 ವರ್ಷ ಮಿರಿರಬಾರದು. ಕನ್ನಡ ಮತ್ತು ಸಂಸ್ಕೃತಿ ವಿಷಯದ ಕುರಿತು ಆಸಕ್ತಿ ಹೊಂದಿದವರಾಗಿರಬೇಕು, ಕೇವಲ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಇದ್ದು, ಜೂನ್ 14ರಿಂದ 2013-14ನೇ ಸಾಲಿನ ಪಾಠ ಪ್ರವಚನವನ್ನು ಪ್ರಾರಂಭಿಸಲು ನಿರ್ಧರಿಸಿದ್ದು, ಅರ್ಜಿ ಸಲ್ಲಿಸ ಬಯಸುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೇ. ಎಂ.ಕೆ. ಹಾಲಸಿದ್ದಯ್ಯ ಶಾಸ್ತ್ರೀಗಳು ಚನ್ನೇಶ್ವರ ಮಠ ದೂ. 9880093315 ಸಂಪರ್ಕಿಸಿ.
ಪಿಯುಸಿ: ಸಂಜೀವಿನಿ ಕಾಲೇಜಿನ ಸಾಧನೆ
ರಾಣಿಬೆನ್ನೂರು: ಇಲ್ಲಿನ ಸಂಜೀವಿನಿ ಪದವಿಪೂರ್ವ ಕಾಲೇಜಿನಿಂದ 2012-13ನೇ ಸಾಲಿನ ದ್ವಿತೀಯ ಪಿಯುಸಿ ಪರಿಕ್ಷೆಗೆ ಹಾಜರಾಗಿದ್ದ 87 ವಿದ್ಯಾರ್ಥಿಗಳಲ್ಲಿ 2 ಅತ್ಯುನ್ನತ ಶ್ರೇಣಿ, 18 ಪ್ರಥಮ, 13 ದ್ವಿತೀಯ, 17 ತೃತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದ ಸಿದ್ದಪ್ಪ ಬಣಕಾರ ಶೇ. 88 ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಕಲಾ ವಿಭಾಗದ ಸರೋಜಾ ಬಿಲ್ಲಾಳ ಶೇ. 86 ಅಂಕಗಳನ್ನು ಪಡೆದು ದ್ವಿತೀಯ, ವಾಣಿಜ್ಯ ವಿಭಾಗದ ಕೆ. ರಂಜಿತಾ ಮೊರೆ ತೃತಿಯ ಸ್ದಾನ ಪಡೆದಿದ್ದಾರೆ.
ಲಯನ್ಸ್ ಶಾಲೆ ಶೇ. 100ರಷ್ಟು ಫಲಿತಾಂಶ
ರಾಣಿಬೆನ್ನೂರು: ನಗರದ ಮೇಡ್ಲೇರಿ ರಸ್ತೆಯಲ್ಲಿರುವ ಲಯನ್ಸ್ ಪ್ರೌಢ ಶಾಲೆಯಿಂದ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತಿದ್ದ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿರುವ ಕಾರಣ ಶಾಲೆಯ ಫಲಿತಾಂಶ ಶೇ. 100ರಷ್ಟಾಗಿದ್ದು, ಅದರಲ್ಲಿ 10 ವಿದ್ಯಾರ್ಥಿಗಳು ಉನ್ನತ ದರ್ಜೆ, 31 ವಿದ್ಯಾರ್ಥಿಗಳು ಪ್ರಥಮ, 7 ವಿದ್ಯಾರ್ಥಿಗಳು ದ್ವಿತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ರೇಣುಕಸ್ವಾಮಿ ಹಿರೇಮಠ 625ಕ್ಕೆ 605 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಎಸ್ಜೆಎಂ ಕಾಲೇಜು ಉತ್ತಮ ಫಲಿತಾಂಶ
ರಾಣಿಬೆನ್ನೂರು: ನಗರದ ಚರ್ಚ್ ರಸ್ತೆಯಲ್ಲಿರುವ ಎಸ್ಜೆಎಂ ಮಹಿಳಾ ಪದವಿಪೂರ್ವ ಕಾಲೇಜಿನಿಂದ 2012-13ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಕುಳಿತಿದ್ದ 118 ವಿದ್ಯಾರ್ಥಿನಿಯರಲ್ಲಿ 110 ವಿದ್ಯಾರ್ಥಿನಿಯರು ಪಾಸಾಗಿದ್ದು, ಒಟ್ಟಾರೆ ಫಲಿತಾಂಶ ಶೇ. 93.22 ಆಗಿರುತ್ತದೆ. ಪಾಸಾದವರಲ್ಲಿ ಮಂಗಳಾ ಬಡಿಗೇರ ಶೇ. 89.16, ಕೃತಿ ಅಣಜಿ ಶೇ. 85.83, ರೇಣುಕಾ ಲಕ್ಷ್ಮೇಶ್ವರ 85.83, ಮಾಲಾ ಹಂಚಾಟೆ 85.66 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 76 ವಿದ್ಯಾರ್ಥಿನಿಯರು ಪ್ರಥಮ, 21 ವಿದ್ಯಾರ್ಥಿನಿಯರು ದ್ವಿತೀಯ, 9 ವಿದ್ಯಾರ್ಥಿನಿಯರು ತೃತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.