ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವೀರಶೈವ ಧರ್ಮಕ್ಕೆ ರೇವಣಸಿದ್ದೇಶ್ವರ ಶ್ರೀ ಶ್ರಮ ಅನನ್ಯ

Vishwanath S
Updated On : 12 May 2013, 10:59 am

ಶಿಗ್ಗಾಂವಿ: ತಾಲೂಕಿನ ಬಂಕಾಪುರ ವೀರಶೈವ ಧರ್ಮ ಪರಂಪರೆ ಬೆಳಗುವ ಮೂಲಕ ಭಕ್ತ ಸಮೂಹದ ಭಾಗ್ಯೋದಯಕ್ಕೆ ರೇವಣಸಿದ್ದೇಶ್ವರರ ಶ್ರಮ ಅನನ್ಯವಾಗಿದೆ. ಅಂತಹ ಶ್ರೀಗಳ ರಜತ ಮಹೋತ್ಸವ ಸಂಭ್ರಮ ಭಕ್ತರಲ್ಲಿ ಹರ್ಷ ಉಂಟು ಮಾಡಿದೆ ಎಂದು ಕಣ್ವಕುಪ್ಪೆ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಅರಳೆಲೆ ಹಿರೇಮಠದಲ್ಲಿ ಶುಕ್ರವಾರ ರೇವಣಸ್ದಿದೇಶ್ವರ ಪಟ್ಟಾಧಿಕಾರ ರಜತ ಮಹೋತ್ಸವ ನಿಮಿತ್ತ ನಡೆದ ಸಮಾರಂಭದಲ್ಲಿ ವೀರಮಾಹೇಶ್ವರ ವಟುಗಳಿಗೆ ಲಿಂಗದೀಕ್ಷೆ, ಅಯ್ಯಾಚಾರ ದೀಕ್ಷೆ ನೀಡಿದ ನಂತರ ಧರ್ಮೋಪದೇಶ ನೀಡಿದರು.
ವೀರಶೈವ ಧರ್ಮ ಜಾತಿ-ಜನಾಂಗದ ಗಡಿಯನ್ನು ಮೀರಿ, ಸಕಲ ಜೀವಾತ್ಮರಿಗೆ ಒಳಿತನ್ನು ಉಂಟು ಮಾಡಿದೆ. ಹೀಗಾಗಿ ನೂರಾರು ವರ್ಷಗಳಿಂದ ಸರ್ವ ಧರ್ಮಗಳಲ್ಲಿ ವೀರಶೈವ ವಿಶೇಷ ಸ್ಥಾನಮಾನ ಹೊಂದಿದೆ. ಅಂತಹ ಧರ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬರು ಶ್ರೀಗಳ ಆದರ್ಶ ಮಾರ್ಗದಲ್ಲಿ ನಡೆಯಬೇಕು ಎಂದರು.
ಮಳಲಿ ಮಠದ ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ನಾಡಿನ ಅನೇಕ ಶಿವಾಚಾರ್ಯರಿಗೆ ದೀಕ್ಷೆ ನೀಡಿದ ಕೀರ್ತಿ ಅರಳೆಲೆ ಹಿರೇಮಠ ರುದ್ರಮುನಿ ಶಿವಾಚಾರ್ಯರಿಗೆ ಸಲ್ಲುತ್ತದೆ. ಅಂತಹ ಮಹಾತ್ಮರ ಪುಣ್ಯಭೂಮಿ ಇದಾಗಿದ್ದು, ಅಷ್ಟೇ ಅಲ್ಲದೆ ವೀರಶೈವ ಧರ್ಮದ ಪಂಚಪೀಠಗಳ ಶಿವಾದ್ವೈತ ಸಿದ್ಧಾಂತದ ಕೇಂದ್ರ ಸ್ಥಾನವಾಗಿದೆ ಎಂದರು.
ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸ್ದಿದರು. ಡಾ೤ ಆರ್.ಎಸ್. ಅರಳೆಲೆ ಹಿರೇಮಠ, ಪುರಸಭೆ ಸದಸ್ಯ ಹೊನ್ನಪ್ಪ ಹೂಗಾರ, ಮಹೇಶ ಕೋತಂಬ್ರಿ, ಸಂಗಪ್ಪ ಹರವಿ, ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಬಸವರಾಜ ನಾರಾಯಣಪುರ, ಪುರಸಭೆ ಮಾಜಿ ಸದಸ್ಯ ಸೋಮಯ್ಯ ಗೌರಿಮಠ, ಮುಖಂಡರಾದ ಸಿದ್ದಲಿಂಗಪ್ಪ ಸಕ್ರಿ, ಬಸಣ್ಣ ಮರಳಿ, ರಮೇಶ ಶಿರೋಳ, ಮಲ್ಲಿಕಾರ್ಜುನ ನರೇಗಲ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement