ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಿದ್ದರಾಮಯ್ಯ ಸಿಎಂ: ಸಂಭ್ರಮಾಚರಣೆ

Vishwanath S
Updated On : 12 May 2013, 11:00 am

ಹಿರೇಕೆರೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಎಸ್. ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಹಾಗೂ ಶಾಸಕರು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಹಿರೇಕೆರೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ರಾಜ್ಯದಲ್ಲಿ ಉತ್ತಮ ಹಾಗೂ ಪಾರದರ್ಶಕ ಆಡಳಿತ ನೀಡಲಿ ಎಂದು ಹಾರೈಸಿದರು.
ಕಾಂಗ್ರೆಸ್ ಧುರೀಣರಾದ ವೀರಬಸಪ್ಪ ಮತ್ತೂರು, ಪಟ್ಟಣ ಪಂಚಾಯ್ತಿ ಸದಸ್ಯರಾದ ರಮೇಶ ತೋರಣಗಟ್ಟಿ, ನಾಗರಾಜ ಗುಡ್ಡಳ್ಳಿ, ಆನಂದ ನಲವಾಲದ, ರಿಯಾಜ ಮಾಸೂರ, ಮಹಮ್ಮದ್ ಹುಸೇನ ವಡ್ಡಿನಕಟ್ಟಿ, ಗುರುಶಾಂತ ಯತ್ನಳ್ಳಿ, ಪಪಂ ಮಾಜಿ ಸದಸ್ಯ ಶಂಭಣ್ಣ ತಂಬಾಕದ, ಮಹಮ್ಮದ್ ಬೇವಿನಹಳ್ಳಿ, ಜೆ.ಬಿ. ತಂಬಾಕದ, ಸುರೇಶ ಮಡಿವಾಳರ, ನಸ್ರುಲ್ಲಾ ಹಂಸಬಾವಿ, ಅತಾವುಲ್ಲಾ ಹಂಸಬಾವಿ, ಪ್ರತಾಪ ಪಾಲ್ಗೊಂಡಿದ್ದರು. ನಂತರ ಬೈಕ್ ರ್ಯಾಲಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement