ಮಧುರಾ ಹೆಗಡೆಗೆ ಅಭಿನಂದನೆ
ರಾಣಿಬೆನ್ನೂರು: ಜಿಲ್ಲೆಯ ಹಿರೇಕೆರೂರು ತಾಲೂಕಿನ ಕುಡುಪಲ್ಲಿ ಗ್ರಾಮದ ಜಿ.ಬಿ. ಶಂಕರರಾವ್ ಆಂಗ್ಲ ಮಾಧ್ಯಮ ಶಾಲೆಯ ಉಪನ್ಯಾಸಕಿ ಹಾಗೂ ನಗರದ ನಿವಾಸಿಯಾದ ವನಿತಾ ಹೆಗಡೆಯವರ ಪುತ್ರಿ ಮಧುರಾ ಮಂಜುನಾಥ ಹೆಗಡೆ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ್ದಕ್ಕಾಗಿ ಇತ್ತೀಚೆಗೆ ಅಭಿನಂದಿಸಲಾಯಿತು.
ಮೂಡಬಿದರಿಯ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿ ಏಪ್ರಿಲ್-2013 ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಶೇ. 96ರಷ್ಟು ಅಂಕಗಳನ್ನು ಗಳಿಸಿ ಸಾಧನೆಗೈದಿದ್ದಾಳೆ.
ವಿದ್ಯಾರ್ಥಿನಿಗೆ ಜಿ.ಬಿ. ಶಂಕರರಾವ್ ಕಾಲೇಜಿನ ನೌಕರರು ಹಾಗೂ ಮಂಜುನಾಥ ಹೆಗಡೆಯವರ ಅಭಿಮಾನಿಗಳು, ವಿದ್ಯಾರ್ಥಿನಿ ಮಧುರಾಳನ್ನು ಅಭಿನಂದಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.