ರೇಣುಕಾ ಸ್ವಾಮಿ ಹಿರೇಮಠಗೆ ಅಭಿನಂದನೆ
ರಾಣಿಬೆನ್ನೂರು: ನಗರದ ಮೇಡ್ಲೇರಿ ರಸ್ತೆಯಲ್ಲಿರುವ ಲಯನ್ಸ್ ಪ್ರೌಢಶಾಲೆಯಿಂದ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತು 625ಕ್ಕೆ 605 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿ ರೇಣುಕಾಸ್ವಾಮಿ ಹಿರೇಮಠಗೆ ರಾಣಿಬೆನ್ನೂರಿನ ಲಯನ್ಸ್ ಶಾಲೆಯ ಆಡಳಿತ ಮಂಡಳಿ ಇತ್ತೀಚೆಗೆ ಸನ್ಮಾನಿಸಿತು.
ಈತನು ಕನ್ನಡಪ್ರಭ ಪತ್ರಿಕೆಯ ರಾಣಿಬೆನ್ನೂರು ಏಜೆಂಟರಾದ ವಾಗೀಶ ಹಿರೇಮಠರವರ ಪುತ್ರನಾಗಿದ್ದು, ಜಿಲ್ಲೆ ಮತ್ತು ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿ ರೇಣುಕಾಸ್ವಾಮಿ ಹಿರೇಮಠರನ್ನು ಲಯನ್ಸ್ ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿ, ಬಾಲಕನ ತಂದೆ-ತಾಯಿ ಪಾಲಕರಿಗೆ ಅಭಿನಂದನೆ ವ್ಯಕ್ತಪಡಿಸಲಾಯಿತು.
ಸದರಿ ವಿದ್ಯಾರ್ಥಿಯು ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಅಧ್ಯಯನಕ್ಕಾಗಿ ಆಸಕ್ತಿ ವಹಿಸಿರುವನಲ್ಲದೆ, ಸಿಎ ಪದವಿಧರನಾಗಬೇಕೆಂಬ ಆಸೆ ಹೊಂದಿರುವುದಾಗಿ ತಿಳಿಸಿದ್ದಾನೆ.