ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತರಬೇತಿ ಸದುಪಯೋಗ ಮಾಡಿಕೊಳ್ಳಿ: ಸೂರಣಗಿ

Lingaraj Badiger
Updated On : 16 May 2013, 12:00 pm

ಹಾವೇರಿ: ಅಗರಬತ್ತಿ ತರಬೇತಿ ಪಡೆದ ಎಲ್ಲ ಅಂಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ವಿ.ಎಂ. ಸೂರಣಗಿ ಕರೆ ನೀಡಿದರು.
ನಗರದ ವಿಜಯಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಅಗರಬತ್ತಿ ತಯಾರಿಕೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಾನಗಲ್ಲ ತಾಪಂ ಸದಸ್ಯೆ ವಿಜಯ ಹಿರೇಮಠ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ತರಬೇತಿಗಳನ್ನು ಪಡೆದು, ಆರ್ಥಿಕ ಸ್ವಾವಲಂಬನೆ ಸಾಧಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸಂಸ್ಥೆಯ ನಿರ್ದೇಶಕ ವಿಘ್ನೇಶ್ವರ ಭಟ್ಟ ಅವರು ಮಾತನಾಡಿ, ಅಗರಬತ್ತಿ ತಯಾರಿಸುವುದನ್ನು ಕಲಿಯುವುದರ ಜತೆಗೆ ಉದ್ಯಮ ಶೀಲತಾ ಗುಣಗಳನ್ನು ಮೈಗೂಡಿಸಿಕೊಂಡು ಉದ್ಯಮವನ್ನು ಯಶಸ್ಸಿನತ್ತ ಕೊಂಡೊಯ್ಯಬೇಕೆಂದರು. ರವಿ ನಾಯ್ಕ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement