ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾಸ್ಟೆಲ್‌ಗಳಿಗೆ ಅರ್ಜಿ ಆಹ್ವಾನ

Lingaraj Badiger
Updated On : 16 May 2013, 12:01 pm

ರಾಣಿಬೆನ್ನೂರು: ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ(ಬಿಸಿಎಂ)ನಿಂದ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ 2013-14ನೇ ಸಾಲಿನಿಂದ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 5ರಿಂದ 10ನೇ ತರಗತಿವರೆಗೆ ಓದುತ್ತಿರುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ, ಪ. ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಶೇ. 75ರಷ್ಟು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಗೂ ಶೇ. 25ರಷ್ಟು ಪ. ಜಾತಿ-ಪ. ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿಡಲಾಗುತ್ತದೆ. ವಿದ್ಯಾರ್ಥಿ ನಿಲಯದಿಂದ 5 ಕಿ.ಮೀ ಅಂತರದಲ್ಲಿರುವ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಶೇ. 10ರಷ್ಟು, 5 ಕಿ.ಮೀ.ಗಳಿಗಿಂತ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಶೇ. 90ರಷ್ಟು ಸ್ಥಾನಗಳನ್ನು ಮಿಸಲಿಡಲಾಗಿದ್ದು, ಅರ್ಜಿ ಸಲ್ಲಿಸಲು 2013ನೇ ಜೂನ್ 10 ಕೊನೆ ದಿನವಾಗಿದೆ.
ರು. 1 ಲಕ್ಷ ಆದಾಯ ಮಿತಿ ಹೊಂದಿರುವ ಪ್ರವರ್ಗ 1ಕ್ಕೆ ಸೇರಿದವರು ಹಾಗೂ ರು. 44,500 ಆದಾಯ ಮಿತಿ ಹೊಂದಿರುವ 2ಎ, 2ಬಿ, 3ಎ, 3ಬಿ, 3ಎ ಗುಂಪಿಗೆ ಸೇರಿರುವ ಮತ್ತು ಕನಿಷ್ಠ ರು. 2 ಲಕ್ಷ ವಾರ್ಷಿಕ ಆದಾಯ  ಹೊಂದಿರುವ ಎಸ್‌ಸಿ-ಎಸ್ಟಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ರಾಣಿಬೆನ್ನೂರು ನಗರದಲ್ಲಿರುವ ಡಿಟಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಖಾಲಿ ಇರುವ 85,ಬಿಸಿಎಂ ಬಾಲಕರ ವಿದ್ಯಾರ್ಥಿ ನಿಲಯದ 60, ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿರುವ ಬಿಸಿಎಂ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಖಾಲಿ ಇರುವ 75, ಹರನಗಿರಿ ಗ್ರಾಮದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದ 50, ಗುಡಗೂರು ಗ್ರಾಮದಲ್ಲಿರುವ ಬಾಲಕರ ವಸತಿ ನಿಲಯದಲ್ಲಿ ಖಾಲಿಯಿರುವ 50, ಕಾಕೂಳನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಖಾಲಿ ಇರುವ 50, ಇಟಗಿಯ ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯದ 50, ರಾಣಿಬೆನ್ನೂರು ನಗರದ ಬಾಲಕಿಯರ ವಸತಿ ನಿಲಯದಲ್ಲಿನ 50 ಖಾಲಿ ಸ್ಥಾನಗಳಿಗೆ, ಸುಣಕಲ್ ಬಿದರಿ ಗ್ರಾಮದ ಬಸವೇಶ್ವರ ಉಚಿತ ಪ್ರಸಾದ ನಿಲಯ ಹಾಗೂ ಅನಾಥಾಲಯದಲ್ಲಿನ 80 ಸ್ಥಾನಗಳಿಗೆ, ಸುಣಕಲ್ ಬಿದರಿ ಬಿಸಿಎಂ ಹಾಸ್ಟೆಲ್ 35, ನಿಲಾಂಬಿಕಾ ಪ್ರಸಾದ ನಿಲಯದ 30, ರಾಣಿಬೆನ್ನೂರು ನಗರದಲ್ಲಿನ ತರಳಬಾಳು ಜಗದ್ಗುರು ಅನಾಥ ಮಕ್ಕಳ ಪ್ರಸಾದ ನಿಲಯದ 125 ಸ್ಥಾನಕ್ಕೆ, ಹನುಮನಮಟ್ಟಿಯಲ್ಲಿರುವ ಮಹಾತ್ಮಾಗಾಂಧಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದ 65, ದೇವರಗುಡ್ಡದಲ್ಲಿರುವ ಪಂಚಲಿಂಗೇಶ್ವರ ಉಚಿತ ಪ್ರಸಾದ ನಿಲಯದ 50, ಐರಣಿ ಹೊಳೆಮಠದಲ್ಲಿರುವ ಗುರುಸಿದ್ದೇಶ್ವರ ಉಚಿತ ಪ್ರಸಾದ ನಿಲಯದ 50 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿರುವುದಾಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತಿರ್ಣಾಧಿಕಾರಿ ಬಾರ್ಕೇರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement