ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

30ಕ್ಕೆ ಅಡ್ಡಪಲ್ಲಕ್ಕಿ ಉತ್ಸವ, ಧರ್ಮಸಭೆ

Mainashree
Updated On : 17 May 2013, 10:26 am

ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದ ದೇವಸ್ಥಾನ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ನೂತನ ಸ್ಥಿರಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ ರೇಣುಕ ವೀರಸೋಮೇಶ್ವರ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆ ಮೇ 30ರಂದು ಜರುಗಲಿದೆ.
ತಾಲೂಕಿನ ತಡಸ ಗ್ರಾಮದಲ್ಲಿ 59 ವರ್ಷಗಳ ಹಿಂದೆ 1954ರಲ್ಲಿ ಆಗಿನ ಪೀಠಾಧಿಶ್ವರ ಶ್ರೀಮದ್ ರಂಬಾಪುರಿ ಜಗದ್ಗುರುಗಳಾದ ಶ್ರೀ ವೀರಗಂಗಾಧರ ಸ್ವಾಮಿಗಳು ಗ್ರಾಮಕ್ಕೆ ಆಗಮಿಸಿ ಒಂದು ತಿಂಗಳು ಕಾಲ ಗ್ರಾಮದಲ್ಲಿಯೆ ವಾಸ್ತವ್ಯ ಹೂಡಿ ಧರ್ಮಸಭೆ ಹಾಗೂ ಧರ್ಮ ಬೋಧನೆಯನ್ನು ನೀಡಿ ಆ ವೇಳೆಯಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಜರುಗಿದ್ದು, ನಂತರ 2013ರ ಮೇ 30ರಂದು ಈಗಿನ ಜಗದ್ಗುರು ಶ್ರೀ ಮದ್ ರಭಾಪುರಿ ಶ್ರೀ ಪ್ರಸನ್ ರೇಣುಕ ವೀರಸೋಮೇಶ್ವರ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುತ್ತಿದ್ದುದು ವಿಶೇಷ.
ತನ್ನಮ್ಯಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮೇ 19ರಂದು ಬೆಳಗ್ಗೆ 9.30ಕ್ಕೆ ವೀರಭದ್ರೇಶ್ವರ ನೂತನ ಸ್ಥಿರ ಮೂರ್ತಿ ಮೆರವಣಿಗೆ ಹಾಗೂ 19ರಿಂದ 29ರ ವರೆಗೆ ಪ್ರತಿದಿನ 6.30ರಿಂದ 8.30ರ ವರೆಗೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶ್ರೀ ಅಭಿನವ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳಿಂದ ಶ್ರೀ ರೇಣುಕ ಮಹಾತ್ಮೆ ಧರ್ಮಬೋಧನೆ ಜರುಗುತ್ತವೆ.
30ರಂದು ಬೆಳಗ್ಗೆ 5 ಗಂಟೆಗೆ ಶ್ರೀ ವೀರಭದ್ರೇಶ್ವರ ನೂತನ ಸ್ಥಿರಮೂರ್ತಿ ಪ್ರಾಣಪ್ರತಿಷ್ಠಾಪನೆ ಹೋಮ, ಹವನಗಳು, ರುದ್ರಾಭಿಷೇಕ ಜರುಗುತ್ತವೆ. 8 ಗಂಟೆಗೆ ಜಂಗಮ ವಟುಗಳಿಗೆ ಶಿವದೀಕ್ಷಾ(ಅಯ್ಯಾಚಾರ) ಕಾರ್ಯಕ್ರಮ ಜರುಗುವುದು.
9.30ರಿಂದ ಶ್ರೀಮದ್ ರಂಭಾಪುರಿ ಶ್ರೀ 1008 ಜಗದ್ಗುರು ಪ್ರಸನ್ ರೇಣುಕ ವೀರಸೋಮೇಶ್ವರ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು. 3.30ರಿಂದ ಧರ್ಮಸಭೆ ಜರುಗುವುದು.
ಧರ್ಮಸಭೆಯಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಘದ ಉಪಾಧ್ಯಕ್ಷರು ಪಂಚಗ್ರಹ ಹಿರೇಮಠದ ಕಲಾದಗಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಂಕಾಪುರ ಅರಳೆಲೆ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು, ಮುಕ್ತಿಮಂದಿರ ಕ್ಷೇತ್ರದ ಶ್ರೀ ವೀಮಲ ರೇಣುಕ ಮುಕ್ತಿಮನಿ ಶಿವಾಚಾರ್ಯರು, ತಿರ್ಥಹಳ್ಳಿ ತಾಲೂಕಿನ ಮಳಲಿ ಸಂಸ್ಥಾನ ಮಠದ ಶ್ರೀ ಗುರುನಾಗಭೂಷಣ ಶಿವಾಚಾರ್ಯರು, ಭೂ ಹುಲಿಕಟ್ಟಿಯ ಶೈಲೇಶ್ವರಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಕುಂದಗೋಳ ಹಿರೇಮಠದ ಪಂಚಗ್ರಹ ಶ್ರೀ ಶಿಥಿಕಂಠ ಶಿವಾಚಾರ್ಯರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಜಂಗಮ ವಟುಗಳಿಗೆ ಶಿವದೀಕ್ಷಾ(ಅಯ್ಯಾಚಾರ) ಮಾಡಿಸುವವರು ತಡಸ ಗ್ರಾಮದ ಶಿವಮೂರ್ತೆಯ್ಯ ಹಿರೇಮಠ ಅವರಲ್ಲಿ ಹೆಸರು ನೋದಾಯಿಸಲು ಸಮಿತಿ ಪ್ರಕಟಣೆಯಲ್ಲಿ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement