ರಾಣಿಬೆನ್ನೂರು: 20ಕ್ಕೆ ವಾಸವಿ ಜಯಂತಿ, ಹೊಲಿಗೆ ಯಂತ್ರ ವಿತರಣೆ
ರಾಣಿಬೆನ್ನೂರು: ಆರ್ಯವೈಶ್ಯ ಸಂಘ, ತಾಲೂಕು ವಾಸವಿ ಮಹಿಳಾ ಸಂಘ ಮತ್ತು ವಾಸವಿ ಯುವಜನ ಸಂಘ ರಾಣಿಬೆನ್ನೂರು ಆಶ್ರಯದಲ್ಲಿ ಮೇ 20ರಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ನಗರದ ಮೇಡ್ಲೆರಿ ರಸ್ತೆಯಲ್ಲಿರುವ ಆದಿಶಕ್ತಿ ದೇವಸ್ಥಾನದ ಸಭಾ ಭವನದಲ್ಲಿ ವಾಸವಿ ಜಯಂತಿ ಆಚರಣೆ ಹಾಗೂ ಸಮಾಜದ ಬಡ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲು ಸಿದ್ಧತೆ ಮಾಡಿರುವುದಾಗಿ ಪ್ರಕಟಣೆ ತಿಳಿಸಿದೆ.