ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗ್ರಾಮೀಣ ಮಟ್ಟದಿಂದ ಪಕ್ಷ ಸಂಘಟಿಸಿ: ಮಂಜುನಾಥ

Mainashree
Updated On : 18 May 2013, 10:57 am

ರಾಣಿಬೆನ್ನೂರು: ಗ್ರಾಮ ಮಟ್ಟದಿಂದ ಪಕ್ಷವನ್ನು ಬಲಪಡಿಸಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರ ಮನಸ್ಸು ಗೆಲ್ಲುವ ಕಾರ್ಯಕ್ಕೆ ಸರ್ವರು ಪ್ರಾಮಾಣಿಕವಾಗಿ ಕಾರ್ಯಪ್ರವೃತ್ತರಾಗಬೇಕೆಂದು ಜೆಡಿಎಸ್ ಫರಾಭವ ಅಭ್ಯರ್ಥಿ ಹಾಗೂ ನಗರಸಭೆ ಮಾಜಿ ಸದಸ್ಯ ಮಂಜುನಾಥ ಗೌಡಶಿವಣ್ಣನವರ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಶಿದ್ದೇಶ್ವರ ದೇವಸ್ಥಾನದಲ್ಲಿ ಕರೆದಿದ್ದ ತಾಲೂಕು ಜೆಡಿಎಸ್ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಜೆಡಿಎಸ್ ಕಾರ್ಯಕರ್ತರು ಪಕ್ಷ ಸಂಘಟನೆಯ ಕಾರ್ಯವನ್ನು ನಿರಂತರವಾಗಿ ಮಾಡಬೇಕು. ಪಕ್ಷದ ಕಾರ್ಯಕರ್ತರಿಗಾಗಲಿ, ಸಾರ್ವಜನಿಕರಿಗಾಗಲಿ ಯಾವುದೇ ರೀತಿಯಿಂದ ಅನ್ಯಾಯವಾಗುತ್ತಿರುವ ಬಗ್ಗೆ ಕಂಡು ಬಂದಲ್ಲಿ ಪ್ರತಿಭಟಿಸಿ ನ್ಯಾಯ ಒದಗಿಸುವಂತಹ ಶಕ್ತಿ, ಸಾಮರ್ಥ್ಯವನ್ನು ಪಕ್ಷದ ಕಾರ್ಯಕರ್ತರು ಹೊಂದಿದವರಾಗಬೇಕು.
ವಿಧಾನಸಭಾ ಚುನಾವಣೆಯಲ್ಲಿ ಮತ ನೀಡಿದ ಹಾಗೂ ಚುನಾವಣೆ ಸಮಯದಲ್ಲಿ ಸಹಕರಿಸಿದ ಪಕ್ಷದ ಕಾರ್ಯಕರ್ತರಿಗೆ, ಜೆಡಿಎಸ್ ರಾಜ್ಯ ವರಿಷ್ಠರ ಪರ ಇದೇ ಸಂದರ್ಭ ಅಭಿನಂದಿಸಿದರು. ಎಚ್.ಡಿ. ಕುಮಾರಸ್ವಾಮಿಯವರು ರಾಜ್ಯದಲ್ಲಿ 20 ತಿಂಗಳು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಸಾಧಿಸಿದ ಸಾಧನೆಗಳ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಕಾರ್ಯಕರ್ತರು ಚೆನ್ನಾಗಿ ಅರಿತುಕೊಂಡು ಪಕ್ಷ ಸಂಘಟನೆ ಕಾರ್ಯವನ್ನು ಮಾಡಬೇಕೆಂದು ಗೌಡಶಿವಣ್ಣನವರ ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಸಿ.ಸಿ. ಸಣ್ಣಗೌಡ್ರ, ನಿವೃತ್ತ ಪೊಲೀಸ್ ಅಧಿಕಾರಿ, ಜಿಲ್ಲಾ ಜೆಡಿಎಸ್ ಮುಖಂಡ ಬಿ.ಬಿ. ಸಕ್ರಿ, ಜಿಲ್ಲಾ ಜೆಡಿಎಸ್ ಯುವ ಅಧ್ಯಕ್ಷ ರವಿಕುಮಾರ ಬತ್ತದ, ಚನ್ನಮ್ಮ ಗುರುಪಾದದೇವರಮಠ,ಬಸವರಾಜ ಗೌಡಶಿವಣ್ಣನವರ, ಜಿ.ಜಿ. ಹೊಟ್ಟಿಗೌಡ್ರ, ಶೇಖಪ್ಪ ನರಸಗೊಂಡರ, ಎಂ.ಜೆ. ಕಮದೋಡ, ವನಿತಾ ಗುತ್ತಲ, ಡಾ೤ ಸಂಜಯ ನಾಯ್ಕ, ಬಾಬಣ್ಣ ಕೊಪ್ಪದ, ಪವನಕುಮಾರ ಮಲ್ಲಾಡದ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement