ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೀರಾವರಿ, ಉದ್ಯೋಗಾವಕಾಶಕ್ಕೆ ಆದ್ಯತೆ

Mainashree
Updated On : 18 May 2013, 10:59 am

ಹಾನಗಲ್ಲ: ಹಾನಗಲ್ಲ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ತಾಲೂಕಿನ ಮತದಾರ ನೀಡಿದ ತೀರ್ಪನ್ನು ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ ಎಲ್ಲವುಗಳನ್ನು ಈಡೇರಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಕಾನೂನು ಮತ್ತು ಮಾನವ ಹಕ್ಕುಗಳ ಪ್ರಧಾನ ಕಾರ್ಯದರ್ಶಿ ಜಿ.ವಿ. ಕಂಬಾಳಿಮಠ ತಿಳಿಸಿದರು.
ಶುಕ್ರವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನ ಉತ್ತರ ಭಾಗದ ನೀರಾವರಿ, ಮಾವು ಹಾಗೂ ಹಸಿ ಮೆಣಸಿನಕಾಯಿ ಸಂಸ್ಕರಣಾ ಘಟಕ ಸ್ಥಾಪನೆ, ಉದ್ಯೋಗಾವಕಾಶಕ್ಕಾಗಿ ಕಾರ್ಖಾನೆ ಸ್ಥಾಪಿಸುವ ಮೂಲಕ ಜನಸೇವೆ ಮಾಡಲು ಪಕ್ಷ ಸಿದ್ಧವಾಗಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಯೋಜನೆಗಳನ್ನು ಘೋಷಿಸಿ ಕಾರ್ಯರೂಪಕ್ಕೆ ಶ್ರೀಕಾರ ಹಾಕಿದ್ದಾರೆ. ಈಗ ರಾಜ್ಯದಲ್ಲಿ ಹೊಸ ಬದಲಾವಣೆ ಆರಂಭವಾಗಿದೆ. ಚುನಾವಣೆ ಹೊಸ ಇತಿಹಾಸವನ್ನೇ ಬರೆದಿದೆ. ಈಗ ಪಕ್ಷ ಚುನಾವಣಾ ಪೂರ್ವದಲ್ಲಿ ಆಡಿದಂತೆ ಮಾಡಿ ತೋರಿಸುವ ಸಿದ್ಧತೆಯಲ್ಲಿದೆ ಎಂದರು.
ದೃಢ ನಿರ್ಧಾರ: ಬಡವರಿಗೆ ಕೆಜಿಗೆ ರು. 1ನಂತೆ 30 ಕೆಜಿ ಅಕ್ಕಿ, ಹಾಲಿಗೆ ರು. 4 ಸಹಾಧನ, ಸಾಲಮನ್ನಾ, ಭಾಗ್ಯಜ್ಯೋತಿ ಸಾಲಭ್ಯಗಳನ್ನು ತಕ್ಷಣದಿಂದ ಜಾರಿಗೆ ತಂದಿರುವುದು ಕಾಂಗ್ರೆಸ್ ನೇತೃತ್ವದ ಸರ್ಕಾರದ ದೃಢ ಸಂಕಲ್ಪವನ್ನು ಈಡೇರಿಸುವುದಾಗಿದೆ. ಎಲ್ಲ ಘೋಷಣೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಾಗಿದೆ.
ಮತದಾರರ ಬೇಡಿಕೆ ಈಡೇರಿಕೆ: ಹಾನಗಲ್ಲ ತಾಲೂಕಿನ ಮತದಾರ ಜಾಗೃತ ಮತದಾರ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ಧರ್ಮಆದರ್ಶದ ಯುದ್ಧವಾಗಿಯೇ ನಡೆದ ಚುನಾವಣೆಯಲ್ಲಿ ಧರ್ಮಕ್ಕೆ ಜಯವಾಗಿದೆ. ಮತದಾರ ಜಾಣತನ ಪ್ರದರ್ಶಿಸಿ ನೀಡಿದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದೆ ಜನಪರವಾಗಿ ನಡೆದುಕೊಳ್ಳಲಾಗುವುದು.  ಮತದಾರರ ಇಚ್ಛೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದಿಲ್ಲ. ಹಿರಿಯ ರಾಜಕಾರಣಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ, 9 ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪಕ್ಷ ಬದಲಾಯಿಸದೆ ಪಕ್ಷನಿಷ್ಠೆ ತೋರಿದ ಮನೋಹರ ತಹಸೀಲ್ದಾರ್ ಅವರಿಗೆ ಮಂತ್ರಿ ಸ್ಥಾನ ಈ ಬಾರಿ ಸಿಗಲೇಬೇಕು ಎಂದು ಆಗ್ರಹಿಸಿರುವ ಅವರು, ಎಂದೂ ಕೂಡ ಪಕ್ಷದ ಹೈಕಮಾಂಡ್ ವಿರುದ್ಧ ಹೋಗದೆ ಪಕ್ಷ ನಿಷ್ಠೆಯ ಮನೋಹರ ತಹಸೀಲ್ದಾರ್ ಅವರು ಮಂತ್ರಿಯಾಗಿ ರಾಜ್ಯ ಹಾಗೂ ಹಾನಗಲ್ಲ ತಾಲೂಕಿನ ಅಭಿವೃದ್ಧಿಗೆ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಮುತ್ತಣ್ಣ ನಾಸಿಕ, ಶಿವಬಸಪ್ಪ ಪೂಜಾರ, ಟಾಕನಗೌಡ ಪಾಟೀಲ, ಬಸೀರಖಾನ ಪಠಾಣ, ಅನಿಲ ಕನವಳ್ಳಿ, ಎಸ್.ಕೆ. ಕಾಳಪ್ಪನವರ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement